Womens T20 Wc ಇಂದಿನಿಂದ ಮಹಿಳಾ ಟಿ20 ವಿಶ್ವಕಪ್ ಆರಂಭ
ಬಹುನಿರೀಕ್ಷಿತಾ ಮಹಿಳಾ ಟಿ20 ವಿಶ್ವಕಪ್ ಇಂದಿನಿಂದ ಆರಂಭವಾಗಲಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡ ಆರನೆ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಹರ್ಮನ್ಪ್ರೀತ್ ನೇತೃತ್ವದ ಭಾರತ ಚೊಚ್ಚಲ ಟ್ರೋಫಿ ಮೇಲೆ ಕಣ್ಣಿಟ್ಟಿದೆ.
ಕೇಪ್ ಟೌನ್ ನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. 7 ಆವೃತ್ತಿಗಳ ಪೈಕಿ ಆಸ್ಟ್ರೇಲಿಯಾ 5 ಬಾರಿ ಟ್ರೋಫಿ ಗೆದ್ದಿದೆ. 2020ರಿಂದ ಕಠಿಣ ಸವಾಲನ್ನು ಎದುರಿಸುತ್ತಾ ಬಂದಿದೆ.
ಕಳೆದ 22 ತಿಂಗಳಲ್ಲಿ ಆಸ್ಟ್ರೇಲಿಯಾ 1 ಟಿ20 ಪಂದ್ಯವನ್ನು ಮಾತ್ರ ಕೈಚೆಲ್ಲಿದೆ. ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದು ಎರಡನೆ ಬಾರಿ ಹ್ಯಾಟ್ರಿಕ್ ಪ್ರಶಸ್ತಿ ಗೆಲ್ಲಲು ಹೋರಾಡಲಿದೆ. ಒಟ್ಟು ಆರನೆ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲು ಹೋರಾಡಲಿದೆ.
ಮೆಗ್ ಲಾನ್ನಿಂಗ್ ತಂಡಕ್ಕೆ ವಾಪಸ್ ಮರಳಿದ್ದು ತಂಡಕ್ಕೆ ನೂರಾನೆ ಬಲ ಬಂದಿದೆ. ಅಲಿಸ್ಸಾ ಹೀಲಿ ಕೂಡ ತಂಡಕ್ಕೆ ಮರಳಿದ್ದಾರೆ.
ಆಸ್ಟ್ರೇಲಿಯಾ ತಂಡ ಇತ್ತೀಚೆಗೆ ಭಾರತ ವಿರುದ್ಧ ಕಠಿಣ ಸವಾಲು ಎದುರಿಸಿತ್ತು. ಅಭ್ಯಾಸ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧದ ಸೋಲು ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳಿಗೆ ಪ್ರಶಸ್ತಿ ಗೆಲ್ಲಲು ಅವಕಾಶ ಸಿಕ್ಕಿದೆ.
ಕಳೆದ ಬಾರಿಯ ರನ್ನರ್ಅಪ್ ಭಾರತ ಒಂದು ಹೆಜ್ಜೆ ಮುಂದಿಡಬೇಕಿದ್ದು ಪ್ರಶಸ್ತಿ ಗೆಲ್ಲಲ್ಲೂ ಇನ್ನು ಸಾಧ್ಯವಾಗಿಲ್ಲ. ಫೆ.12ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧು ಆಡುವ ಮೂಲಕ ಭಾರತ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ಸ್ಮತಿ ಮಂಧಾನ, ಶಾಫಾಲಿ ವರ್ಮಾ ಮತ್ತು ಹರ್ಮನ್ಪ್ರೀತ್ ಕೌರ್ ತಾರಾ ಬ್ಯಾಟರ್ಗಳಾಗಿದ್ದಾರೆ. 2020ರ ಫೈನಲ್ನಲ್ಲಿ ಭಾರತ ವನಿತೆಯರು ನಿರಾಸೆ ಅನುಭವಿಸಿದ್ದರು.
ಭಾರತ ತಂಡ ಇಂಗ್ಲೆಂಡ್, ವೆಸ್ಟ್ಇಂಡೀಸ್, ಐರ್ಲೆಂಡ್ ಮತ್ತು ಪಾಕಿಸ್ತಾನದ ಜೊತೆ ಒಂದೆ ಗುಂಪಿನಲ್ಲಿ ಸ್ಥಾನ ಪಡೆದಿದೆ.
2009ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿದ್ದ ಇಂಗ್ಲೆಂಡ್ ಇದೀಗ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಬಾಂಗ್ಲಾದೇಶ ಒಂದು ಗುಂಪಿನಲ್ಲಿ ಸ್ಥಾನ ಪಡೆದಿವೆ.
Womens T20 Wc , cricket updates , saakshatv







