IND vs AUS 1st Test : ಹಿಟ್ ಮ್ಯಾನ್ ರೋಹಿತ್ ಶರ್ಮ ಶತಕದ ಸಂಭ್ರಮ
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ನಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.
ನಾಗ್ಪುರ್ನಲ್ಲಿ ನಡೆಯುತ್ತಿರುವ ಪಂದ್ಯದ ಮೊದಲ ದಿನದಾಟದಲ್ಲೇ ಅಮೋಘ ಆರಂಭ ಕಂಡಿದ್ದ ರೋಹಿತ್, 2ನೇ ದಿನದಾಟದಲ್ಲೂ ತಮ್ಮ ಜವಾಬ್ದಾರಿಯ ಆಟವಾಡಿದರು. ಒಂದೆಡೆ ಭಾರತೀಯ ಬ್ಯಾಟ್ಸ್ಮನ್ಗಳು ರನ್ಗಳಿಸಲು ತಿಣುಕಾಡುತ್ತಿದ್ದರೆ, ಮತ್ತೊಂದೆಡೆ ತಾಳ್ಮೆಯ ಆಟವಾಡಿದ ಹಿಟ್ಮ್ಯಾನ್ ಅಮೋಘ ಶತಕಗಳಿಸಿ ಮಿಂಚಿದರು. ಆಸ್ಟ್ರೇಲಿಯಾದ ಸ್ಪಿನ್ ಬೌಲರ್ಗಳ ಪ್ರಾಬಲ್ಯದ ನಡುವೆಯೂ ಮೇಲುಗೈ ಸಾಧಿಸಿದ ರೋಹಿತ್, ಎಚ್ಚರಿಕೆಯ ಆಟದಿಂದ ತಂಡದ ಮೊತ್ತ ಹೆಚ್ಚಿಸಿದರು.
ತವರಿನಂಗಳದಲ್ಲಿ ಶತಕದ ಸಂಭ್ರಮ ಆಚರಿಸಿದ ಹಿಟ್ ಮ್ಯಾನ್ ರೋಹಿತ್ ಶರ್ಮ, ಆ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ತಮ್ಮ 9ನೇ ಶತಕ ದಾಖಲಿಸಿದರು. ಅಲ್ಲದೇ ಇದು ರೋಹಿತ್ ಶರ್ಮ ಅವರು ಆಸ್ಟ್ರೇಲಿಯಾ ವಿರುದ್ಧ ದಾಖಲಿಸಿದ ಮೊದಲ ಟೆಸ್ಟ್ ಶತಕವಾಯಿತು. ನಾಯಕನ ಏಕಾಂಗಿ ಹೋರಾಟದ ಫಲವಾಗಿ ಭಾರತ, ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯಲು ಕಾರಣವಾಯಿತು.
ನಾಯಕ ರೋಹಿತ್ ಶರ್ಮ ಜವಾಬ್ದಾರಿಯುತ ಆಟದ ಮೂಲಕ ತಂಡದ ಮೊತ್ತವನ್ನ ಹೆಚ್ಚಿಸಿದರೆ. ಮೊದಲ ವಿಕೆಟ್ ಪತನದ ನಂತರದಲ್ಲಿ ಬಂದ ರವಿಚಂದ್ರನ್ ಅಶ್ವಿನ್(23), ಚೇತೇಶ್ವರ್ ಪುಜಾರ(7), ವಿರಾಟ್ ಕೊಹ್ಲಿ(12) ಹಾಗೂ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಸೂರ್ಯಕುಮಾರ್ ಯಾದವ್(8) ಬ್ಯಾಟಿಂಗ್ ವೈಫಲ್ಯ ಅನುಭವಿಸುವ ಮೂಲಕ ನಿರಾಸೆ ಮೂಡಿಸಿದರು.
IND vs AUS 1st Test , hitman rohith sharma hits sechury








