INDvsAus ಭಾರತ ಮೊದಲ ಇನ್ನಿಂಗ್ಸ್ 400 ರನ್ ಗಳಿಗೆ ಆಲೌಟ್
ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್ನ ಲ್ಲಿ ಟೀಮ್ ಇಂಡಿಯಾ 400 ರನ್ ಗಳಿಗೆ ಆಲೌಟ್ ಆಗಿದೆ. 223 ರನ್ಗಳ ಮುನ್ನಡೆ ಪಡೆದಿದೆ.
ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಮೈದಾನದಲ್ಲಿ ನಡೆದ ಮೂರನೆ ದಿನದಾಟದ ಪಂದ್ಯದಲ್ಲಿ ಬ್ಯಾಟಿಂಗ್ ಮುಂದುವರಸಿದ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಅಕ್ಸರ್ ಪಟೇಲ್
ತಂಡದ ಮೊತ್ತವನ್ನು 400 ರನ್ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ರವೀಂದ್ರ ಜಡೇಜಾ 185 ಎಸೆತದಲ್ಲಿ 9 ಬೌಂಡರಿ ಒಟ್ಟು 70 ರನ್ ಹೊಡೆದರು. ಮರ್ಫಿ ಎಸೆತದಲ್ಲಿ ಬೌಲ್ಡ್ ಆದರು.
ಮೊಹ್ಮದ್ ಶಮಿ 37 ರನ್ ಹೊಡೆದು ಮೊತ್ತ ಹೆಚ್ಚಿಸಿದರು. ಮೊಹ್ಮದ್ ಸಿರಾಜ್ ಅಜೇಯ 1 ರನ್ ಹೊಡೆದರು. ಏಕಾಂಗಿ ಹೋರಾಟ ಮಾಡಿದ ಅಕ್ಸರ್ ಪಟೇಲ್ 10 ಬೌಂಡರಿ 1 ಸಿಕ್ಸರ್ ಸಿಡಿಸಿ 84 ರನ್ ಗಳಿಸಿದರು.
84 ರನ್ ಗಳಿಸಿದ್ದಾಗ ಅಕ್ಸರ್ ಪಟೇಲ್ ಕಮಿನ್ಸ್ ಎಸೆತದಲ್ಲಿ ಬೌಲ್ಡ್ ಆದರು. ಆಸ್ಟ್ರೇಲಿಯಾ ಪರ ಟಾಡ್ ಮರ್ಫಿ 124 ಕ್ಕೆ 7, ನಾಯಕ ಪ್ಯಾಟ್ ಕಮಿನ್ಸ್ 78ಕ್ಕೆ 2, ನಾಥನ್ ಲಿಯಾನ್ 126ಕ್ಕೆ 1 ವಿಕೆಟ್ ಪಡೆದರು.
INDvsAus , team india Allout in first innings








