Hansika Motwani Wedding Controvercy : ಬೆಸ್ಟ್ ಫ್ರೆಂಡ್ ಪತಿಯನ್ನೇ ಮದುವೆಯಾಗಿ ಟೀಕೆಗೆ ಗುರಿಯಾಗಿದ್ದ ಬಗ್ಗೆ ನಟಿ ಹೇಳಿದ್ದು ಹೀಗೆ..!!
ಕೆಲ ತಿಂಗಳ ಹಿಂದಷ್ಟೇ ಬಹುಭಾಷಾ ನಟಿ ಬಿಂದಾಸ್ ಹುಡುಗಿ ಹನ್ಸಿಕಾ ಮೋಟ್ವಾನಿ ಮದುವೆಯಾಗಿದ್ದಾರೆ..
ಉದ್ಯಮಿ ಸೋಹೈಲ್ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.. ಇದು ಸೋಹೈಲ್ ಗೆ 2 ನೇ ಮದುವೆಯಾಗಿದೆ.. ಮೊದಲಿಗೆ ಮದುವೆಯಾಗಿದ್ದವರು ಹನ್ಸಿಕಾರ ಬೆಸ್ಟ್ ಫ್ರೆಂಡ್ ಎನ್ನಲಾಗಿದೆ..
ಇದ್ರಿಂದಾಗಿ ಹನ್ಸಿಕಾ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು.. ಬೆಸ್ಟ್ ಫ್ರೆಂಡ್ ಸಂಸಾರ ಮರಿದವರು , ಬೆಸ್ಟ್ ಫ್ರೆಂಡ್ ಪತಿಯನ್ನೇ ಪಟಾಯಿಸಿದವರು ಎಂದೆಲ್ಲಾ ಟ್ರೋಲ್ ಗಳನ್ನೂ ಮಾಡಲಾಗಿತ್ತು…
ಆದ್ರೆ ತಮ್ಮ ಮದುವೆಯ ಬಗ್ಗೆ ಒಂದಷ್ಟು ವಿಚಾರಗಳನ್ನ ಜನರಿಗೆ ತೋರಿಸೋದಕ್ಕೆ ಹನ್ಸಿಕಾ ರೆಡಿಯಾಗಿದ್ದಾರೆ..
ಒಟಿಟಿಯಲ್ಲಿ ಹನ್ಸಿಕಾ- ಸೋಹೈಲ್ ಮದುವೆ ವಿಡಿಯೋ ಪ್ರಸಾರ ಆಗುತ್ತಿದೆ. ಇದರ ಮೊದಲ ಎಪಿಸೋಡ್ ನಲ್ಲಿ ಒಂದಷ್ಟು ವಿಚಾರಗಳನ್ನು ಹನ್ಸಿಕಾ ಹೇಳಿಕೊಂಡಿದ್ದಾರೆ.
ಉದ್ಯಮಿ ಸೋಹೈಲ್ ಈ ಮೊದಲೇ ಒಂದು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು.
ಈಗ ಹನ್ಸಿಕಾ ಸೋಹೈಲ್ ಮದುವೆ ನಂತರ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದಾರೆ.. ಲವ್ ಶಾದಿ ಡ್ರಾಮಾದಲ್ಲಿ ಹನ್ಸಿಕಾ ಈ ಬಗ್ಗೆ ಮಾತನಾಡಿದ್ದಾರೆ..
ಆ ಸಮಯದಲ್ಲಿ ಈ ವ್ಯಕ್ತಿಯ ಪರಿಚಯ ನನಗಿತ್ತು ಎಂದ ಮಾತ್ರಕ್ಕೆ ತಪ್ಪು ನನ್ನದೇ ಎಂದು ಹೇಳಲು ಸಾಧ್ಯವಿಲ್ಲ. ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಪಬ್ಲಿಕ್ ಫಿಗರ್ ಆಗಿರುವುದರಿಂದ ಜನರಿಗೆ ನನ್ನ ಕಡೆ ಬೆರಳು ಮಾಡಿ, ನನ್ನನ್ನು ವಿಲನ್ ಮಾಡೋದು ಸುಲಭ. ಸೆಲೆಬ್ರಿಟಿ ಆಗಿರುವುದರಿಂದ ನಾನು ತೆರುತ್ತಿರುವ ಬೆಲೆ ಇದು ಎಂದು ಹನ್ಸಿಕಾ ಹೇಳಿದ್ದಾರೆ.
ನಾನು ಈ ಮೊದಲು ಮದುವೆ ಆಗಿದ್ದೆ. ಅದು ಮುರಿದು ಬಿತ್ತು. ಈ ವಿಚಾರ ಪ್ರಪಂಚಕ್ಕೆ ಗೊತ್ತಾಯಿತು. ಆದರೆ, ತಪ್ಪಾದ ರೀತಿಯಲ್ಲಿ ಈ ಮಾಹಿತಿಯನ್ನು ಹೇಳಲಾಯಿತು. ಹನ್ಸಿಕಾ ಅವರಿಂದ ನನ್ನ ಹಾಗೂ ರಿಂಕಿ ಸಂಬಂಧ ಹಾಳಾಯಿತು ಎಂದು ಹೇಳಲಾಯಿತು. ಇದು ಸುಳ್ಳು ಹಾಗೂ ಆಧಾರ ರಹಿತವಾದುದ್ದು. ನಾವಿಬ್ಬರೂ ಸ್ನೇಹಿತರು. ಹನ್ಸಿಕಾ ನನ್ನ ಮದುವೆಗೆ ಹಾಜರಾದ ಫೋಟೋ ನೋಡಿದ್ದರಿಂದ ಈ ಊಹಾಪೋಹ ಪ್ರಾರಂಭವಾಯಿತು ಎಂದು ಸೋಹೈಲ್ ಸ್ಪಷ್ಟನೆ ನೀಡಿದ್ದಾರೆ.
View this post on Instagram
View this post on Instagram
Hansika Motwani Wedding Controvercy








