ADVERTISEMENT
Monday, August 24, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Karavali Karnataka

Bengaluru: ತುಳುವೆರೆ ಚಾವಡಿಗೆ 25ರ ಸಂಭ್ರಮ; ತುಳು ಭಾಷೆ ಅಧಿಕೃತ ಸ್ಥಾನಮಾನಕ್ಕಾಗಿ ಒಗ್ಗಟ್ಟಿನ ಮಂತ್ರ….

ಹೃದಯ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ. ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಓಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

Naveen Kumar B C by Naveen Kumar B C
February 12, 2023
in Karavali Karnataka, Newsbeat, ಬೆಂಗಳೂರು
Tulu Language
Share on FacebookShare on TwitterShare on WhatsappShare on Telegram

ತುಳುವೆರೆ ಚಾವಡಿಗೆ 25ರ ಸಂಭ್ರಮ; ತುಳು ಭಾಷೆ ಅಧಿಕೃತ ಸ್ಥಾನಮಾನಕ್ಕಾಗಿ ಒಗ್ಗಟ್ಟಿನ ಮಂತ್ರ….

ಹೃದಯ ಭಾವನೆಗಳ ಇನ್ನೊಂದು ರೂಪವೇ ಭಾಷೆ. ಭಾಷೆಗೆ ಸೆಳೆಯುವಂತಹ ಶಕ್ತಿ ಇದೆ. ತುಳುನಾಡಿನವರಿಗೆ ಎರಡು ಭಾಷೆ ಇದೆ. ಕನ್ನಡ ರಾಜ್ಯ ಭಾಷೆಯಾದ್ರೆ, ತುಳು ಮಾತೃಭಾಷೆಯಾಗಿದೆ.
ಈ ಎರಡು ಭಾಷೆಗಳನ್ನು ಉಳಿಸುವ ಮತ್ತು ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಓಡಿಯೂರು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹೇಳಿದ್ದಾರೆ.

Related posts

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

August 24, 2026
ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

August 24, 2026

Shree

ಬೆಂಗಳೂರಿನ ತುಳುವೆರೆ ಚಾವಡಿ 25ನೇ ವರ್ಷದ ಬೊಳ್ಳಿ ಪರ್ಬ ಕಾರ್ಯಕ್ರಮದಲ್ಲಿ ಜೋಕುಲೆ ಉಜ್ಜಾಲ್​ ತುಳು ಪದ ಮಾಲೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ತುಳುಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ವಿಚಾರ ಕೂಡ ಹೋರಾಟದ ಹಾದಿಯಲ್ಲಿದೆ. ಆದ್ರೆ ಅದಕ್ಕಿಂತ ಮುನ್ನ ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕು. ಈಗಾಗಲೇ ಸರ್ಕಾರ ಈ ಬಗ್ಗೆ ಅಧ್ಯಯನ ಸಮಿತಿಯನ್ನು ರಚಿಸಿದ್ದು, ಇದು ಆದಷ್ಟು ಬೇಗ ಜಾರಿಯಾಗಲು ತುಳುನಾಡಿನವರು ಎಲ್ಲರೂ ಒಗ್ಗಟ್ಟಿನಿಂದಿರಬೇಕು ಎಂದು ಹೇಳಿದ್ರು.

ಇನ್ನು ನಮ್ಮ ಮಾತೃಭಾಷೆಯನ್ನು ಎಲ್ಲರೂ ಉಳಿಸಿಕೊಳ್ಳಬೇಕು. ಕರಾವಳಿಯ ಜನರಲ್ಲಿ ನಾಯಕತ್ವದ ಗುಣವಿದೆ. ಸದಾ ಕ್ರೀಯಾಶೀಲತೆಯಿಂದ ಇರುವ ಜನ ಆತ್ಮವಿಶ್ವಾಸದಿಂದ ಇರುತ್ತಾರೆ. ಹಾಗೇ ತುಳುಭಾಷೆ ಜಾತಿ ಧರ್ಮವನ್ನು ಮೀರಿ ನಿಂತಿದೆ ಎಂದು ತುಳುಭಾಷೆಯಲ್ಲಿ ಅಡಗಿರುವ ಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.

 seetharam katil

ರಾಜ್ಯ ಸರ್ಕಾರ ಈಗಾಗಲೇ ತುಳು ಭಾಷೆಯನ್ನು ಎರಡನೇ ಭಾಷೆಯನ್ನಾಗಿಸಲು ಅಧ್ಯಯನ ಸಮಿತಿಯನ್ನು ರಚಿಸಿದೆ. ಹಾಗೇ ತುಳು ಭಾಷೆಯ ಲಿಪಿಯೂ ಸರಿಯಾಗಬೇಕು. ಜೊತೆಗೆ ಶಾಲೆಗಳಲ್ಲಿ ತುಳು ಭಾಷೆಯನ್ನು ನಾಲ್ಕನೇ ತರಗತಿಯವರೆಗೆ ಆಯ್ಕೆಯ ಭಾಷೆಯನ್ನಾಗಿಸಬೇಕು ಎಂದು ಸಲಹೆ ನೀಡಿದ್ರು.

ಇದೇ ವೇಳೆ, ಖ್ಯಾತ ಯಕ್ಷಗಾನ ಕಲಾವಿದರಾದ ಸೀತಾರಾಮ ಕುಮಾರ್ ಕಟೀಲ್, ಹಿರಿಯ ತುಳು ಸಾಹಿತಿಗಳಾದ ಕುಶಲಾಕ್ಷಿ ವಿ.ಕಣ್ವತೀರ್ಥ, ಸಮಾಜ ಸೇವೆಗಾಗಿ ರವಿ ಕಟಪಾಡಿ, , ಪ್ರಕಾಶ್ ಜೆ ಶೆಟ್ಟಿಗಾರ್ ಇವರಿಗೆ ತುಳುನಾಡ್ದ ಸಿರಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಇಂಗ್ಲೀಷ್ ಮತ್ತು ಬೇರೆ ಭಾಷೆಯ ರೈಮ್ ಸ್ ಬದಲಾಗಿ ತುಳು ಭಾಷೆಯ ಸಾಹಿತ್ಯವನ್ನ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದೊಂದಿಗೆ ಜೋಕುಲೆ ಉಜ್ಜಾಲು ಪುಸ್ತಕ ಬಿಡುಗಡೆ ಮಾಡಲಾಯಿತು. ಇದರ ಜೊತೆಗೆ ಸಾಹಿತಿ ಪ್ರೊಫೆಸರ್ ಕೆ ಇ ರಾಧಾಕೃಷ್ಣ ಅವರ ಸತ್ಯಪ್ಪೆ ಬಾಲೆಲು ತುಳು ಕಥೆಯ ಆಡಿಯೋ ಪುಸ್ತಕವನ್ನ ಲೋಕಾರ್ಪಣೆಗೊಳಿಸಲಾಯಿತು.

ಬೆಳ್ಳಿ ಹಬ್ಬ ಸಂಭ್ರಮದ ಪ್ರಯುಕ್ತ ಹಿರಿಯ ತುಳು -ಕನ್ನಡ ಸಾಹಿತಿ ಡಿ.ಕೆ.ಚೌಟ ಇವರ ಸಂಸ್ಮರರ್ಣಾಥವಾಗಿ ಹಿರಿಯ ತುಳು ಸಾಹಿತಿ ಉಗಪ್ಪ ಪೂಜಾರಿಯವರಿಗೆ ಪ್ರಶಸ್ತಿ ಮತ್ತು ಸಾಮಾಜಿಕ ಚಿಂತಕ ,ತುಳು ಹೊರಾಟಗಾರ ಡಾ.ಉದಯ ಧರ್ಮಸ್ಥಳ ಇವರ ಸಂಸ್ಮರರ್ಣಾಥವಾಗಿ ತುಳು ಸೇವೆ. ಯುವ ಪ್ರತಿಭೆ ಸತೀಶ್ ಅಗ್ಪಲ್ ರವರಿಗೆ ಪ್ರಶಸ್ತಿ ನೀಡಲಾಯ್ತು. ವಿಶೇಷ ಚೇತನ ಮೂವರು ಪ್ರತಿಭೆಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಅಧ್ಯಕ್ಷ ಪುರುಷೋತ್ತಮ್ ಚೇಂಡ್ಲಾ, ಉಮೇಶ್ ಪೂಂಜಾ ಸೇರಿದಂತೆ ಕಾರ್ಯಕ್ರಮದಲ್ಲಿ ತುಳುವೆರೆ ಚಾವಡಿ ಸಂಘದ ಪದಾಧಿಕಾರಿಗಳು, ಸದಸ್ಯರು ಭಾಗಿಯಾಗಿದ್ದರು.

Bengaluru: Tuluvere Chavadi celebrates 25 years; Unity mantra for official status of Tulu language….

Tags: bengalurutulu language
ShareTweetSendShare
Join us on:

Related Posts

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

200 ರೂಪಾಯಿ ಕೊಟ್ಟು ನೀರು ಕುಡಿಯುವವರಿಗೆ 50 ರೂಪಾಯಿ ಸಕ್ಕರೆ ಒಂದು ಲೆಕ್ಕವೇ? ರೈತರ ಲಾಭಕ್ಕಾಗಿ ಗ್ರಾಹಕರು ಸ್ವಲ್ಪ ಭರಿಸಲಿ!: ಬೆಲೆ ಏರಿಕೆ ಸಮರ್ಥಿಸಿಕೊಂಡ ಸಚಿವ ಲಕ್ಷ್ಮಣ ಸವದಿ

by Shwetha
August 24, 2026
0

ಬಾಗಲಕೋಟೆ: ರಾಜ್ಯದಲ್ಲಿ ಸಕ್ಕರೆ ಬೆಲೆ ಏರಿಕೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಹಕಾರ ಸಚಿವ ಲಕ್ಷ್ಮಣ ಸವದಿ ಅವರು ಬೆಲೆ ಏರಿಕೆಯನ್ನು ವಿಭಿನ್ನವಾಗಿ ಸಮರ್ಥಿಸಿಕೊಂಡಿದ್ದಾರೆ....

ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

ಮನ್ ಕೀ ಬಾತ್ ಸಾಕು ಜನ್ ಕೀ ಬಾತ್ ಮಾಡಿ – ಮೋದಿ ಮತ್ತು ಅಮಿತ್ ಶಾರನ್ನು ಈ ದೇಶದ ಯುವಕರು ಅಟ್ಟಾಡಿಸಿ ಹೊಡೆಯುವ ಕಾಲ ದೂರವಿಲ್ಲ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭವಿಷ್ಯವಾಣಿ

by Shwetha
August 24, 2026
0

ಬೆಂಗಳೂರು: ಅಧಿಕಾರದ ಮೇಲಿನ ಅತಿಯಾದ ವ್ಯಾಮೋಹದಿಂದ ದೇಶದ ವ್ಯವಸ್ಥೆಯನ್ನು ಹಾಳುಗೆಡವುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ...

ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕುಳಿತಿದ್ದವರು ನೀವು: ಟೇಪ್ ಹಿಡಿದು ಜಮೀನು ಅಳೆಯುವವರಿಗೆ ರೈತರ ನೋವು ಅರ್ಥವಾಗಲ್ಲ!-ಡಿಕೆ ಬ್ರದರ್ಸ್ ಇತಿಹಾಸ ಕೆದಕಿ ಹೆಚ್ ಡಿ ಕುಮಾರಸ್ವಾಮಿ ಗುಡುಗು

ಕೋತ್ವಾಲನಿಗೆ ಹೆಂಡ ಕುಡಿಸುತ್ತಾ ಕುಳಿತಿದ್ದವರು ನೀವು: ಟೇಪ್ ಹಿಡಿದು ಜಮೀನು ಅಳೆಯುವವರಿಗೆ ರೈತರ ನೋವು ಅರ್ಥವಾಗಲ್ಲ!-ಡಿಕೆ ಬ್ರದರ್ಸ್ ಇತಿಹಾಸ ಕೆದಕಿ ಹೆಚ್ ಡಿ ಕುಮಾರಸ್ವಾಮಿ ಗುಡುಗು

by Shwetha
August 24, 2026
0

ರಾಮನಗರ: ನೈಸ್ ರಸ್ತೆ ಟೋಲ್ ವಿಚಾರವಾಗಿ ರಾಜಕೀಯ ಕಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಹಾಗೂ ಕೇಂದ್ರ...

ನಾಯಿ ಸಾಕಲು ರಿಜಿಸ್ಟ್ರೇಶನ್ ಬೇಕು, ನೂರು ವರ್ಷದ ಆರೆಸ್ಸೆಸ್ ಗೆ ಬೇಡವೇ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

ನಾಯಿ ಸಾಕಲು ರಿಜಿಸ್ಟ್ರೇಶನ್ ಬೇಕು, ನೂರು ವರ್ಷದ ಆರೆಸ್ಸೆಸ್ ಗೆ ಬೇಡವೇ? ಸಚಿವ ಶಿವರಾಜ ತಂಗಡಗಿ ಪ್ರಶ್ನೆ

by Shwetha
August 24, 2026
0

ಕೊಪ್ಪಳ: ವಂದೇ ಮಾತರಂ ಹಾಡದವರು ದೇಶ ಬಿಟ್ಟು ಹೋಗಿ ಎಂದು ಹೇಳಿಕೆ ನೀಡುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ವಿರುದ್ಧ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದ್ದಾರೆ. ಕನಕಗಿರಿಯಲ್ಲಿ...

ಜನಸಾಮಾನ್ಯರ ತೆರಿಗೆ ಹಣ ವ್ಯರ್ಥ ಮಾಡಬೇಡಿ: ನಾಗೇಂದ್ರ ಮರು ಸೇರ್ಪಡೆ ಕಾನೂನುಬದ್ಧ, ಕ್ಲೀನ್ ಚಿಟ್ ಸಿಕ್ಕ ಮೇಲೂ ಗದ್ದಲವೇಕೆ?- ಯು.ಟಿ. ಖಾದರ್ ಆಕ್ರೋಶ

ಜನಸಾಮಾನ್ಯರ ತೆರಿಗೆ ಹಣ ವ್ಯರ್ಥ ಮಾಡಬೇಡಿ: ನಾಗೇಂದ್ರ ಮರು ಸೇರ್ಪಡೆ ಕಾನೂನುಬದ್ಧ, ಕ್ಲೀನ್ ಚಿಟ್ ಸಿಕ್ಕ ಮೇಲೂ ಗದ್ದಲವೇಕೆ?- ಯು.ಟಿ. ಖಾದರ್ ಆಕ್ರೋಶ

by Shwetha
August 24, 2026
0

ಮಂಗಳೂರು: ವಿಧಾನಸಭೆಯ ಅಧಿವೇಶನವು ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸುವ ಪವಿತ್ರ ವೇದಿಕೆಯಾಗಬೇಕೇ ಹೊರತು ರಾಜಕೀಯ ಮಾಡುವ ಅಖಾಡವಾಗಬಾರದು ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram