ಬ್ರೆಜಿಲ್ ನ ಕ್ರೈಸ್ಟ್ ದಿ ರಿಡೀಮರ್ ಪ್ರತಿಮೆಗೆ ಬಡಿದ ಸಿಡಿಲು – ಚಿತ್ರಗಳು ವೈರಲ್…
ಬ್ರೆಜಿಲ್ ನ ರಿಯೊ ಡಿ ಜನೈರೊ 100 ಎತ್ತರದ ಏಸು ಕ್ರಿಸ್ತನ ಪ್ರತಿಮೆಗೆ ಸಿಡಿಲು ಬಡಿದಿರುವ ಅಪರೂಪದ ಫೋಟೋ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇದೀಗ ಪೋಟೋ ಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಅದ್ಭುತ ದೃಶ್ಯವನ್ನ ಫರ್ನಾಂಡೋ ಬ್ರಾಗಾ ಅವರು ಸೆರೆಹಿಡಿದಿದ್ದಾರೆ. ಅಲ್ಲದೇ ಈ ಫೋಟೊಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. “ಡಿವೈನ್ ಲೈಟ್ನಿಂಗ್ ಅಂದರೇ ದೈವಿಕ ಬೆಳಕು ಎಂದು ಕ್ಯಾಪ್ಶನ್ ನೀಡಿದ್ದಾರೆ.
ಈ ಘಟನೆ ಶುಕ್ರವಾರ, ಫೆಬ್ರವರಿ 10, 2023 ರಂದು 6:55 ಕ್ಕೆ ನಡೆದಿದೆ. ಇದೀಗ ಈ ಅಧ್ಭುತ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು 63,000 ಕ್ಕೂ ಹೆಚ್ಚು ಲೈಕ್‌ಗಳನ್ನ ಗಳಿಸಿದರೇ, ಟ್ವಿಟರ್‌ನಲ್ಲಿ 20 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
ಕ್ರೈಸ್ಟ್ ದಿ ರಿಡೀಮರ್ ಎಂಬ ಈ ಪ್ರತಿಮೆ ವಿಶ್ವದ ಯೇಸುವಿನ ಅತಿದೊಡ್ಡ ಪ್ರತಿಮೆಯಾಗಿದ್ದು, ಕೊರ್ಕೊವಾಡೊ ಬೆಟ್ಟದ ಮೇಲೆ 2,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಸ್ಥಾಪಿಸಲಾಗಿದೆ. 2007 ರಲ್ಲಿ ವಿಶ್ವದ ಏಳು ಅದ್ಭುತಗಳು ಎಂದು ಹರಸೆರಿಸಲ್ಪಟ್ಟ ಈ ಪ್ರತಿಮೆಯನ್ನ 700 ಟನ್ ಬಲವರ್ಧಿತ ಕಾಂಕ್ರಿಟ್ನಿಂದ ಮಾಡಲ್ಪಟ್ಟಿದೆ.
Christ the Redeemer: Brazil’s Christ the Redeemer statue struck by lightning – pictures viral…








