Shubhman Gill ಶುಭ್ಮನ್ ಐಸಿಸಿ ತಿಂಗಳ ಆಟಗಾರ
ಟೀಮ್ ಇಂಡಿಯಾದ ಯುವ ಬ್ಯಾಟರ್ ಶುಭ್ಮನ್ ಗಿಲ್ ಐಸಿಸಿ ಜನವರಿ ತಿಂಗಳ ಆಟಗಾರನಾಗಿ ನೇಮಕವಾಗಿದ್ದಾರೆ. ಇಂಗ್ಲೆಂಡ್ ಅಂಡರ್ 19 ತಂಡದ ನಾಯಕಿ ಗ್ರೇಸ್ ಸ್ಕ್ರೀವೆನ್ಸ್ ಅತಿ ಕಿರಿಯ ಮಹಿಳಾ ಆಟಗಾರ್ತಿಯಾಗಿ ಆಯ್ಕೆಯಾಗಿದ್ದಾರೆ.
ಕಳೆದ ತಿಂಗಳು 23 ವರ್ಷದ ಶುಭ್ಮನ್ ಗಿಲ್ ತವರಿನಲ್ಲಿ ಶ್ರೀಲಂಕಾ ಮತ್ತು ನ್ಯೂಜಿಲೆಂಡ ವಿರುದ್ಧ ಸೀಮಿತ ಓವರ್ಗಳ ಸರಣಿಯಲ್ಲಿ 3 ಶತಕ ಸೇರಿ 567 ರನ್ಗಳ ಭರ್ಜರಿ ಬ್ಯಾಟಿಂಗ್ ಮಾಡಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಹೈದ್ರಾಬಾದ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ್ದರು. ನ್ಯೂಜಿಲೆಂಡ್ನ ಡೆವೊನ್ ಕಾನ್ವೆ ಮತ್ತು ಸಹ ಆಟಗಾರ ಮೊಹ್ಮದ್ ಸಿರಾಜ್ ಅವರ ಪೈಪೋಟಿ ಎದುರಿಸಿ ಮತ ಪಡೆದು ಈ ಪ್ರಶಸ್ತಿ ಪಡೆದಿದ್ದಾರೆ.
ಕಳೆದ ವರ್ಷ 2022ರ ಅಕ್ಟೋಬರ್ನಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ಈ ಪ್ರಶಸ್ತಿ ಗೆದ್ದ ಭಾರತೀಯ ಆಟಗಾರರಾಗಿದ್ದರು.
Shubhman Gill is the icc’s month player is proud moment








