ಹೆಂಡತಿಯೊಂದಿಗೆ ಮತ್ತೊಮ್ಮೆ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ ಹಾರ್ದಿಕ್ ಪಾಂಡ್ಯ…
ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕಾ ಪಾಂಡ್ಯ ಮತ್ತೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸೋಮವಾರದಿಂದ ಮೂರು ದಿನಗಳ ಕಾಲ ಅದ್ಧೂರಿಯಾಗಿ ವಿವಾಹ ಮಹೋತ್ಸವ ನಡೆಯಲಿದೆ. ರಾಜಸ್ಥಾನದ ಉದಯಪುರ ಇದಕ್ಕೆ ವೇದಿಕೆ ಸೃಷ್ಟಿಸಲಾಗುತ್ತಿದೆ. ಪಾಂಡ್ಯ ಈಗಾಗಲೇ ಮದುವೆಯಾಗಿದ್ದನಲ್ಲ ? ಮತ್ತೆನಿದು ಹೊಸ ಮದುವೆ ? ನತಾಶಾ ಗೆ ಡೈವರ್ಸ ಕೊಟ್ಟನಾ ಎಂದು ಕೇಳಬೇಡಿ. ಪಾಂಡ್ಯ ತನ್ನ ಹೆಂಡತಿಯನ್ನ ಹೊರತುಪಡಿಸಿ ಬೇರೆ ಯಾರನ್ನೂ ಮದುವೆಯಾಗುತ್ತಿಲ್ಲ ಹೆಂಡತಿ ನತಾಶ ಜೊತೆಗೆ ಮರು ಮದುವೆ ಆಗುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ ಸ್ಟಾಂಕೋವಿಕ್ ಜೊತೆ ಜನವರಿ 21, 2022 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. 31 ಮೇ 2020 ರಂದು ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದರು. ಆ ವೇಳೆ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಹಾಜರಿದ್ದರು. ಈ ಜೋಡಿಗೆ ಈಗಾಗಲೇ ಜುಲೈ 2020 ರಲ್ಲಿ ಮಗು ಕೂಡ ಜನಿಸಿತ್ತು. ಇದೀಗ ಈ ಜೋಡಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯಾಗಲೂ ನಿರ್ಧರಿಸಿದ್ದಾರೆ. ಇದಕ್ಕಾಗಿ ರಾಜಸ್ಥಾನದ ಉದಯಪುರವನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಫೆ.13 ನಿನ್ನೆ ಅರಿಶಿನ, ಮೆಹಂದಿ ಕಾರ್ಯಕ್ರಮಗಳು ನೆಡೆದಿವೆ. ಫೆಬ್ರವರಿ 14 ರಂದು ಅಂದರೇ ಇಂದು ಮದುವೆ ನಡೆಯಲಿದೆ.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಇಬ್ಬರೂ ಸೆಲೆಬ್ರಿಟಿಗಳಾಗಿರುವುದರಿಂದ ಬಾಲಿವುಡ್ ತಾರೆಯರು ಮತ್ತು ಕ್ರಿಕೆಟಿಗರು ಮದುವೆಗೆ ಹಾಜರಾಗಲಿದ್ದಾರೆ. ನತಾಶಾ 2013 ರಲ್ಲಿ ಸತ್ರಗ್ರಹಂ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ಬಿಗ್ ಬಾಸ್ ನ ಎಂಟನೇ ಸೀಸನ್ ನಲ್ಲೂ ನತಾಶಾ ಕಾಣಿಸಿಕೊಂಡಿದ್ದರು.
Hardik Natasa Wedding: Cricketer Hardik Pandya is getting married again..! Three days of wedding celebrations








