Women’s dead body in freezer : ಢಾಬಾ ಫ್ರೀಜರ್ ನಲ್ಲಿ 24 ವರ್ಷದ ಯುವತಿಯ ಮೃತದೇಹ ಪತ್ತೆ….
ಢಾಬಾ ಮಾಲೀಕನೋರ್ವ 25 ವರ್ಷದ ಯುವತಿನ್ನ ಕೊಂದು ಫ್ರೀಜರ್ ನಲ್ಲಿಟ್ಟಿಟ್ಟಿದ್ದ ಬೆಚ್ಚಿ ಬೀಳಿಸುವ ಘಟನೆಯು ರಾಷ್ಟ್ರ ರಾಜಧಾನಿ ನೈರುತ್ಯ ದೆಹಲಿಯ ನಜಾಫ್ ಗಢದಲ್ಲಿ ನಡೆದಿದೆ..
ಮೃತ ಯುವತಿಯನ್ನು ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಗುರುತಿಸಲಾಗಿದೆ. ಢಾಬಾ ಮಾಲೀಕ 2-3 ದಿನಗಳ ಹಿಂದೆ ಯುವತಿಯನ್ನು ಕೊಂದು, ಆಕೆಯ ಶವವನ್ನು ಢಾಬಾದ ಫ್ರಿಜರ್ ನಲ್ಲಿ ಇರಿಸಿದ್ದ ಎಂಬ ಅನುಮಾನ ವ್ಯಕ್ತವಾಗಿದೆ.
ಢಾಬಾದ ಮಾಲೀಕ ಸಾಹಿಲ್ ಗೆಹ್ಲೋಟ್ ಹಾಗೂ ಯುವತಿ ಪರಸ್ಪರ ಸಂಬಂಧದಲ್ಲಿದ್ದರು ಎನ್ನಲಾಗಿದೆ. ಈ ನಡುವೆ ಸಾಹಿಲ್ ಗೆ ಬೇರೊಬ್ಬ ಯುವತಿಯ ಜತೆ ಮದುವೆ ನಿಶ್ಚಯವಾಗಿತ್ತು. ನಂತರ ಸಾಹಿಲ್ ಹಾಗೂ ಯುವತಿ ನಡುವೆ ಗಲಾಟೆ ನಡೆದಿದೆ…
ಈ ವೇಳೆ ಯುವತಿ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದರಿಂದ ಕೋಪಗೊಂಡು ಆಕೆಯನ್ನು ಕೊಂದು ಶವವನ್ನು ತನ್ನ ಢಾಬಾದ ಫ್ರಿಜರ್ ನಲ್ಲಿ ಬಚ್ಚಿಟ್ಟಿದ್ದಾನೆ ಎನ್ನಲಾಗಿದೆ..
ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಢಾಬಾ ಮಾಲೀಕ ಸಾಹಿಲ್ ಗೆಹ್ಲೋಟ್‍ನನ್ನು ಬಂಧಿಸಿದ್ದಾರೆ. ಕಳೆದ 3-4 ದಿನಗಳ ಹಿಂದೆ ಯುವತಿಯನ್ನು ಹತ್ಯೆಗೈಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Women’s dead body in freezer , newdehli ,








