Asia mixed team Championship : ಕಜಿಕಿಸ್ತಾನದ ವಿರುದ್ಧ ಗೆದ್ದು ಶುಭಾರಂಭ ಮಾಡಿದ ಭಾರತ
ಬ್ಯಾಡ್ಮಿಂಟನ್ ಏಷ್ಯಾ ಮಿಕ್ಸಡ್ ಟೀಮ್ ಚಾಂಪಿಯನ್ಶಿಪ್ನಲ್ಲಿ ಭಾರತ ಕಜಿಕಿಸ್ತಾನದ ವಿರುದ್ಧ 5-0 ಅಂಕಗಳಿಂದ ಸುಲಭವಾಗಿ ಗೆದ್ದು ಶುಭಾರಂಭ ಮಾಡಿದೆ.
ಪಿ,ವಿ,ಸಿಂಧು ಮತ್ತು ಎಷ್.ಎಸ್.ಪ್ರಣಯ್ ಸುಲಭ ಗೆಲುವು ದಾಖಲಿಸಿದರು.
ಮಿಶ್ರ ಡಬಲ್ಸ್ ನಲ್ಲಿ ಇಶಾನ್ ಭಟ್ ನಗರ್ ತನಿಶಾ ಕ್ರಾಸ್ಟೊ ಎದುರಾಳಿ ಮಾಕ್ ಶಟ್ ಹಾಗೂ ನಾರಿಗಿಜಾ ಜೋಡಿ ವಿರುದ್ಧ 21-5, 21-11 ಅಂಕಗಳಿಂದ ಮಣಿಸಿದರು.
ಪುರಷರ ಸಿಂಗಲ್ಸ್ ನಲ್ಲಿ ಪ್ರಣಯ್ ಎದುರಾಳಿ ಡಿಮಿಟ್ರಿ ವಿರುದ್ಧ 21-9, 21-11 ಅಂಕಗಳಿಂದ ಸೋಲಿಸಿದರು.
ಸಿಂಧು ಸಿಂಗಲ್ಸ್ ವಿಭಾಗದಲ್ಲಿ ಕಾಮಿಲಾ ಸ್ಮಾಗುಲಾವಾ ವಿರುದ್ಧ 21-4, 21-12 ಅಂಕಗಳಿಂದ ಸುಲಭವಾಗಿ ಗೆದ್ದರು.
ಎರಡನೆ ಮಿಶ್ರ ಡಬಲ್ಸ್ ತಂಡ ಕೃಷ್ಣ ಪ್ರಸಾದ್ ಮತ್ತು ವಿಷ್ಣುವರ್ಧನ, ಮಹಿಳಾ ಡಬಲ್ಸ್ ನಲ್ಲಿ ಟ್ರೆಸ್ಸಾ ಜೋಲಿ ಮತ್ತು ಗಾಯತ್ರಿ ಗೋಪಿಚಂದ್ ನೇರ ಸೆಟ್ಗಳಲ್ಲಿ ಗೆದ್ದರು.
ಬಿ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಯುಎಇ ಎಮಿರೇಟ್ಸ್ ತಂಡವನ್ನು ಎದುರಿಸಲಿದೆ.
Asia mixed team Championship , india won againt kazakistan








