Most congested city in india : ದೇಶದಲ್ಲೇ ಅತ್ಯಂತ ಜನನಿಬಿಡ ನಗರ “ಬೆಂಗಳೂರು”…
ನಮ್ಮ ದೇಶದ ಅತ್ಯಂತ ಜನನಿಬಿಡ ನಗರ ಯಾವುದು ಗೊತ್ತಾ? ನೀವು ಊಹಿಸಿದ್ದು ನಿಜ. ಭಾರತದ ಅತ್ಯಂತ ಜನನಿಬಿಡ ನಗರ ಬೆಂಗಳೂರು.
ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ ಟಾಮ್ ಅವರು 2022 ವರ್ಷಕ್ಕೆ ಬಿಡುಗಡೆ ಮಾಡಿದ ಸಂಚಾರ ಸೂಚ್ಯಂಕ ಇದನ್ನ ಸ್ಪಷ್ಟಪಡಿಸಿದೆ. ಸಿಟಿ ಸೆಂಟರ್ ವಿಭಾಗದಲ್ಲಿ ಬೆಂಗಳೂರು ವಿಶ್ವದ ಎರಡನೇ ಅತ್ಯಂತ ಜನನಿಬಿಡ ನಗರ ಎಂದು ಗುರುತಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ. ಲಂಡನ್ ಪ್ರಥಮ ಸ್ಥಾನದಲ್ಲಿದೆ.
29 ನಿಮಿಷಗಳಲ್ಲಿ 10 ಕಿ.ಮೀ!
ಭಾರತದ ಸಿಲಿಕಾನ್ ಸಿಟಿ ಎಂದು ಗುರುತಿಸಿಕೊಂಡಿರುವ ಬೆಂಗಳೂರಿನಲ್ಲಿ ಪ್ರಯಾಣಿಸುವುದೆಂದರೆ ಚಾಲಕರಿಗೆ ಯಮ ಹಿಂಸೆ. ಬೆಂಗಳೂರು ರಸ್ತೆಗಳಲ್ಲಿ ವಾಹನ ಸಂಚಾರ ಅಷ್ಟು ಸುಲಭವಲ್ಲ. 10 ಕಿ.ಮೀ ದೂರವನ್ನು ಕ್ರಮಿಸಲು ಸುಮಾರು 29 ನಿಮಿಷ ಮತ್ತು 10 ಸೆಕೆಂಡುಗಳನ್ನ ತೆಗೆದುಕೊಳ್ಳುತ್ತದೆ ಎಂದು ಟಾಮ್‌ಟಾಮ್ ವರದಿ ಮಾಡಿದೆ.
ಪೀಕ್ ಸಮಯದಲ್ಲಿ ನಗರದಲ್ಲಿ ಸರಾಸರಿ ಪ್ರಯಾಣದ ವೇಗ ಗಂಟೆಗೆ 18 ಕಿ.ಮೀ. 2021 ರಲ್ಲಿ ಇದು 14 ಕಿಮೀ ಎಂದು ದಾಖಲಾಗಿದೆ. ಪೀಕ್ ಅವರ್‌ನಲ್ಲಿ ಹೆಚ್ಚು ಸಮಯ ಟ್ರಾಫಿಕ್‌ನಲ್ಲಿ ಕಳೆಯುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನದಲ್ಲಿದೆ. ಒಟ್ಟು 129 ಗಂಟೆ ಸಂಚಾರ ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಎರಡನೇ ನಗರ ಪುಣೆ…
ಭಾರತದಲ್ಲಿ ಎರಡನೇ ಅತಿ ಹೆಚ್ಚು ಜನದಟ್ಟಣೆಯ ನಗರವಾಗಿ ಪುಣೆ ಜಾಗತಿಕ ಶ್ರೇಯಾಂಕದಲ್ಲಿ 6 ನೇ ಸ್ಥಾನವನ್ನು ಪಡೆದುಕೊಂಡಿದೆ. ಪುಣೆಯಲ್ಲಿ 10 ಕಿ.ಮೀ ಕ್ರಮಿಸಲು 27 ನಿಮಿಷ 20 ಸೆಕೆಂಡ್ ತೆಗೆದುಕೊಳ್ಳುತ್ತದೆ. ಇದು 2021 ಕ್ಕಿಂತ 1 ನಿಮಿಷ ಮತ್ತು 10 ಸೆಕೆಂಡುಗಳು ಹೆಚ್ಚು. ಜಾಗತಿಕ ಸಂಚಾರ ಸೂಚ್ಯಂಕದಲ್ಲಿ ದೆಹಲಿ ಮತ್ತು ಮುಂಬೈ ಕೂಡ ಟಾಪ್ 50 ರಲ್ಲಿವೆ. ವರದಿಯ ಪ್ರಕಾರ, ಲಂಡನ್ ನಲ್ಲಿ 10 ಕಿಲೋಮೀಟರ್ ಕ್ರಮಿಸಲು 36 ನಿಮಿಷ 20 ಸೆಕೆಂಡುಗಳು ತೆಗೆದುಕೊಳ್ಳುತ್ತದೆ, ಇದು ಮೊದಲ ಸ್ಥಾನದಲ್ಲಿದೆ.
Most congested city in India: Bangalore is the most congested city in the country.