India vs Australia : ಟೆಸ್ಟ್ ಕ್ರಿಕೆಟ್ ನಲ್ಲಿ 250 ವಿಕೆಟ್ 2500 ರನ್ ಸಾಧನೆ ಮಾಡಿದ ಜಡೇಜಾ…
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ (ಬಿಜಿಟಿ) ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿದೆ. ಆಸ್ಟ್ರೇಲಿಯಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದೆ.
ಪಂದ್ಯದ ಮೊದಲ ದಿನದ ಮೂರನೇ ಸೆಷನ್ ವೇಳೆಗೆ ಕಾಂಗರೂ ತಂಡ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 220 ರನ್ ಗಳಿಸಿದೆ. ಪೀಟರ್ ಹ್ಯಾಂಡ್ಸ್‌ಕಾಂಬ್ ಮತ್ತು ಪ್ಯಾಟ್ ಕಮಿನ್ಸ್ ಕ್ರೀಸ್‌ನಲ್ಲಿದ್ದಾರೆ. ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರ ಖವಾಜಾ ವಿಕೆಟ್ ಪಡೆಯುವ ಮೂಲಕ ರವೀಂದ್ರ ಜಡೇಜಾ 250 ವಿಕೆಟ್ ಗಳ ಗುರಿ ತಲುಪಿದ್ದಾರೆ. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಮೊದಲ ವಿಕೆಟ್ ಇದಾಗಿದೆ.
ರಿವರ್ಸ್ ಸ್ವೀಪ್ ಮಾಡುವ ವೇಳೆ ಎಡವಿದ ಖವಾಜಾ ಕೆ ಎಲ್ ರಾಹುಲ್ ಹಿಡಿದ ಅದ್ಭುತ ಕ್ಯಾಚ್ ಗೆ ವಿಕೆಟ್ ಒಪ್ಪಿಸಿದರು. ಇದಕ್ಕೂ ಮೊದಲು 81 ರನ ಸಿಡಿಸಿ 20ನೇ ಅರ್ಧಶತಕ ಪೂರೈಸಿದ್ದರು. ಈ ಮೂಲಕ ಜಡೇಜಾ 250 ವಿಕೆಟ್ ಪಡೆದು ಕಪಿಲ್ ದೇವ್, ರಿಚರ್ಡ್ ಹ್ಯಾಡ್ಲೀ ಮತ್ತು ಶಾನ್ ಪೊಲಾಕ್ ಅವರನ್ನ ಹಿಂದಿಕ್ಕಿದ್ದಾರೆ.
ಜಡೇಜಾ 250 ಟೆಸ್ಟ್ ವಿಕೆಟ್‌ಗಳನ್ನ ಪಡೆದು 2500 ರನ್ ಗಳಿಸಿದ ಅಪರೂಪದ ಡಬಲ್ ಸಾಧನೆಯನ್ನ ಪೂರೈಸಿದ್ದಾರೆ. ಇಂಗ್ಲೆಂಡ್ ಆಲ್ರಂಡ್ ಇಯಾನ್ ಬಾಥಮ್ ನಂತರ ಅತಿವೇಗವಾಗಿ ಪೂರೈಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.
India vs Australia : Jadeja achieved 250 wickets and 2500 runs in Test cricket…








