Christian Atsu : ಟರ್ಕಿ ಭೂಕಂಪಕ್ಕೆ ಫುಟ್ಬಾಲ್ ಆಟಗಾರ ಕ್ರಿಶ್ಚಿಯನ್ ಅಟ್ಸು ನಿಧನ…
ಫುಟ್ಬಾಲ್ ಅಭಿಮಾನಿಗಳಿಗೆ ಇದು ಕಹಿ ಸುದ್ಧಿ. ಘಾನಾದ ರಾಷ್ಟ್ರೀಯ ಆಟಗಾರ ಮತ್ತು ಮಾಜಿ ನ್ಯೂಕ್ಯಾಸಲ್ ಮಿಡ್‌ಫೀಲ್ಡರ್ ಕ್ರಿಶ್ಚಿಯನ್ ಅಟ್ಸು ಅವರು ಟರ್ಕಿಯ ಭೂಕಂಪದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಟರ್ಕಿಯ ಅವರ ನಿವಾಸದ ಅವಶೇಷಗಳ ಅಡಿಯಲ್ಲಿ ಕ್ರಿಶ್ಚಿಯನ್ ಅವರ ದೇಹ ಶನಿವಾರ ಪತ್ತೆಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಕ್ರಿಶ್ಚಿಯನ್ ಅಟ್ಸು ಅವರ ದೇಹವು ಟರ್ಕಿಯ ದಕ್ಷಿಣ ಪ್ರಾಂತ್ಯದ ಹಟಾಯ್‌ನಲ್ಲಿ ಅವಶೇಷಗಳಡಿಯಲ್ಲಿ ಪತ್ತೆಯಾಗಿದೆ ಎಂದು ಅವರ ಮ್ಯಾನೇಜರ್ ಮುರಾತ್ ಉಜುನ್ಮೆಹ್ಮೆಟ್ ಶನಿವಾರ ಡಿಎಚ್‌ಎ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಕ್ರಿಶ್ಚಿಯನ್ ಅಟ್ಸು ಅವರ ಸಾವಿನ ಸುದ್ದಿಯನ್ನು ಅವರ ಏಜೆಂಟ್ ನಾನಾ ಸೆಚೆರೆ ಅವರು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ. “ಇಂದು ಬೆಳಿಗ್ಗೆ ಕ್ರಿಶ್ಚಿಯನ್ ಅಟ್ಸು ಅವರ ದೇಹವನ್ನ ಪಡೆದುಕೊಂಡಿದ್ದೇವೆ ಎಂದು ತಿಳಿಸಲು ಭಾರವಾದ ಹೃದಯವನ್ನ ಹೊಂದಿದ್ದೇನೆ. ಅವರ ಸುರಕ್ಷಿತ ಮರುಳುವಿಕೆಗೆ ಪ್ರಾರ್ಥಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಕ್ರಿಶ್ಚಿಯನ್ ಅಟ್ಸು ಅವರ ಸಾವಿನ ಸುದ್ದಿ ತಿಳಿದ ನಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂತಾಪ ಸೂಚಿಸಿದ್ದಾರೆ.
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪವು ಸುಮಾರು 40,000 ಜನರನ್ನು ಬಲಿ ತೆಗೆದುಕೊಂಡಿದೆ.
Christian Atsu : Football player Christian Atsu died in Turkey earthquake…








