India vs Australia : 262 ರನ್ ಗೆ ಕುಸಿದ ಭಾರತ – 61 ರನ್ ಗೆ ಒಂದು ವಿಕೆಟ್ ಕಳೆದುಕೊಂಡ ಆಸಿಸ್…
ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್ ಪಂದ್ಯ ರೋಚಕ ತಿರುವು ಪಡೆದುಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 1 ರನ್ ಮುನ್ನಡೆ ಸಾಧಿಸಿದ ನಂತರ ಎರಡನೇ ದಿನದಂತ್ಯಕ್ಕೆ ಆಸ್ಟ್ರೇಲಿಯಾ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ ಒಂದು ವಿಕೆಟ್ ಕಳೆದುಕೊಂಡು 61 ರನ್ ಗಳಿಸಿದೆ. ಟ್ರಾವಿಸ್ ಹೆಡ್ ಮತ್ತು ಮಾರ್ನಸ್ ಲ್ಯಾಬುಸ್ಚಾಗ್ನೆ ಅಜೇಯರಾಗಿ ಉಳಿದಿದ್ದಾರೆ. ಅತಿಥೆಯೇ ತಂಡ ಒಟ್ಟು 62 ರನ್ಗಳ ಮುನ್ನಡೆ ಸಾಧಿಸಿದೆ.
ಇದಕ್ಕೂ ಮೊದಲು ಭಾರತ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 262 ರನ್‌ಗಳಿಗೆ ಆಲೌಟ್ ಆಗಿತ್ತು. ಒಂದು ಹಂತದಲ್ಲಿ ಭಾರತ ತಂಡ 139 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದಾದ ನಂತರ ಅಕ್ಷರ್ ಪಟೇಲ್ (74) ಮತ್ತು ರವಿಚಂದ್ರನ್ ಅಶ್ವಿನ್ (37) 8ನೇ ವಿಕೆಟ್‌ಗೆ 114 ರನ್ ಜೊತೆಯಾಟ ನಡೆಸಿ ಭಾರತ ತಂಡವನ್ನ ಕುಸಿತದಿಂದ ಮೇಲೆತ್ತಿದರು. ಇದಕ್ಕೂ ಮೊದಲು ಆಸ್ಟ್ರೇಲಿಯಾ ತಂಡ ಮೊದಲು ಬ್ಯಾಟಿಂಗ್ ನಡೆಸಿ 263 ರನ್ ಗಳಿಸಿತ್ತು.
ಕೆಎಲ್ ರಾಹುಲ್ ಮತ್ತೊಮ್ಮೆ ವಿಫಲ….
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಶನಿವಾರ ನಡೆದ ಪಂದ್ಯದ ಎರಡನೇ ದಿನವಾದ ಭಾರತ 21/0 ಸ್ಕೋರ್‌ನೊಂದಿಗೆ ಎರಡನೇ ದಿನದಾಟವನ್ನು ಪ್ರಾರಂಭಿಸಿತು. ಭಾರತದ ನಾಯಕ ರೋಹಿತ್ ಶರ್ಮಾ ವೈಯಕ್ತಿಕ ಸ್ಕೋರ್ 13 ಮತ್ತು ಕೆಎಲ್ ರಾಹುಲ್ 4 ರನ್‌ಗಳೊಂದಿಗೆ ದಿನದಾಟ ಆರಂಭಿಸಿದರು. ಇಬ್ಬರೂ ಮೊದಲ ವಿಕೆಟ್‌ಗೆ 46 ರನ್ ಸೇರಿಸಿದ ನಂತರ ನಾಥನ್ ಲಿಯಾನ್ ಜೋಡಿಯನ್ನ ಬ್ರೇಕ್ ಮಾಡಿದರು. ಕೆ ಎಲ್ ರಾಹುಲ್ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಊಟಕ್ಕೂ ಮುನ್ನ ಟೀಂ ಇಂಡಿಯಾ 88 ರನ್ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರ ಜಡೇಜಾ ಜೊತೆ ಅರ್ಧಶತಕದ ಜೊತೆಯಾಟ ನೀಡುವ ಮೂಲಕ ಕೊಹ್ಲಿ ಕುಸಿತವನ್ನ ತಡೆದರು. ಆದರೇ ವಿವಾದಾತ್ಮಕ ನಿರ್ಧಾರದಿಂದಾಗಿ ಕೊಹ್ಲಿ 44 ರನ್ ಗಳಿಸಿ ವಿಕೆಟ್ ಒಪ್ಪಿಸಬೇಕಾಗಿ ಬಂತು. ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದ ಭಾರತಕ್ಕೆ ಅಕ್ಷರ್ ಮತ್ತು ಅಶ್ವಿನ್ 114 ರನ್ ಗಳ ಜೊತೆಯಾಟದಿಂದ ಮೇಲೆತ್ತಿದರು.
ಕಾಂಗರೂಗಳ ಪರ ನಾಥನ್ ಲಿಯಾನ್ 5 ವಿಕೆಟ್ ಪಡೆದರೆ, ಟಾಡ್ ಮರ್ಫಿ ಮತ್ತು ಮ್ಯಾಥ್ಯೂ ಕುನ್ಮನ್ ತಲಾ ಎರಡು ವಿಕೆಟ್ ಪಡೆದರು. ನಾಯಕ ಪ್ಯಾಟ್ ಕಮಿನ್ಸ್ ಒಂದು ವಿಕೆಟ್ ಪಡೆದರು.
India vs Australia: India fell to 262 runs – Aussies lost one wicket for 61 runs…








