Kabza : ‘ನಮಾಮಿ ನಮಾಮಿ’ ಹಾಡಿಗೆ ಮಸ್ತ್ ರೆಸ್ಪಾನ್ಸ್..!!
ಭಾರತದ ಮುಂದಿನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಉಪೇಂದ್ರ ನಟನೆಯ ಪ್ಯಾನ್ ಇಂಡಿಯನ್ ಸಿನಿಮಾ ಕಬ್ಜ ೀಗಾಗಲೇ ಸಾಕಷ್ಟು ಕ್ರೇಜ್ ಹುಟ್ಟುಹಾಕಿದೆ..
ಈ ಸಿನಿಮಾದಲ್ಲಿ ಸುದೀಪ್ ಭಾರ್ಗವ ಭಕ್ಷಿಯಾಗಿ ಕಾಣಿಸಿಕೊಳ್ತಿದ್ದು , ಮತ್ತಷ್ಟು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿಸಿದೆ..
80 ರ ದಶಕದ ಭೂಗತ ಜಗತ್ತಿನ ಆಧಾರಿತ ಸಿನಿಮಾ ಇದಾಗಿದೆ… ಸುಮಾರು 7 ಕ್ಕೂ ಅಧಿಕ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.. ಶ್ರಿಯಾ ಶರಣ್ ಸೇರಿ ಸ್ಟಾರ್ ನಟರೇ ಇದ್ದಾರೆ.. ಆರ್ ಚಂದ್ರು ನಿರ್ದೇಶಿಸುತ್ತಿದ್ದಾರೆ..
ಅಂದ್ಹಾಗೆ ಮಹಾಶಿವರಾತ್ರಿ ಪ್ರಯುಕ್ತ ‘ನಮಾಮಿ ನಮಾಮಿ’ ಹಾಡು ರಿಲೀಸ್ ಆಗಿದೆ.
ಕಿನಾಲ್ ರಾಜ್ ಬರೆದಿರುವ ಈ ಹಾಡನ್ನು ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ. ಖ್ಯಾತ ನಟಿ ಶ್ರೇಯಾ ಶರಣ್ ಈ ಹಾಡಿನಲ್ಲಿ ನಟಿಸಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಹಾಡಿಗೆ ಸಖತ್ ಒಳ್ಳೆ ರೆಸ್ಪಾನ್ಸ್ ವ್ಯಕ್ತವಾಗ್ತಿದೆ..
ಈ ಹಾಡಿನ ಬಿಡುಗಡೆ ಸಮಾರಂಭ ಇತ್ತೀಚೆಗೆ ಚೆನ್ನೈನಲ್ಲಿ ಅದ್ದೂರಿಯಾಗಿ ನಡೆಯಿತು.
Kabza , namami namami , cinima updates