Dhruva Sarja : ಬೈಕ್ ನಿಂದ ಬಿದ್ದು ಕೋಮಾ ತಲುಪಿದ್ದ ಅಭಿಮಾನಿ ಕುಟುಂಬಕ್ಕೆ 5 ಲಕ್ಷ ಕೊಟ್ಟ ಧ್ರುವ..!!
ಬೈಕ್ ನಿಂದ ಬಿದ್ದು ಕೋಮಾ ತಲುಪಿದ್ದ ಧ್ರುವ ಸರ್ಜಾ ಅಭಿಮಾನಿಯನ್ನ ಆಸ್ಪತ್ರೆಗೆ ನೋಡಲು ಬಂದಿದ್ದ ಧ್ರುವ ಸರ್ಜಾ ಕಣ್ಣೀರಿಟ್ಟಿದ್ದಾರೆ..
ಕೋಮಾ ತಲುಪಿದ್ದ ಮಗನ ಅಂಗಾಂಗವನ್ನ ದಾನ ಮಾಡಲು ಪೋಷಕರು ಮುಂದಾಗಿದ್ದಾರೆ..
ಫೆಬ್ರವರಿ 14ರಂದು ನಟ ಧ್ರುವ ಸರ್ಜಾ ಅಭಿಮಾನಿ ಪೃಥ್ವಿರಾಜ್ ಎಂಬುವವರು ಬೈಕ್‌ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.
ಹೆಲ್ಮೆಟ್ ಧರಿಸದ ಕಾರಣ ತಲೆಗೆ ಗಂಭೀರವಾಗಿ ಪೆಟ್ಟಾಗಿ ಕೋಮಾ ಸ್ಥಿತಿ ತಲುಪಿದ್ದಾರೆ.
ಸದ್ಯ ಬೆಂಗಳೂರಿನ ಎಂ.ಎಸ್.ರಾಮಯ್ಯ ಮೇಮೊರಿಯಲ್ ಆಸ್ಪತ್ರೆಯಲ್ಲಿ ಪೃಥ್ವಿರಾಜ್ ಗೆ ಚಿಕಿತ್ಸೆ ನೀಡಲಾಗುತ್ತಿದೆ.
ನಟ ಧ್ರುವ ಸರ್ಜಾ ಆಸ್ಪತ್ರೆಗೆ ಭೇಟಿ ನೀಡಿ ಅಭಿಮಾನಿಯ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.
ನಂತರ ಮಾತನಾಡಿರುವ ಧ್ರುವ “ಭಾನುವಾರ ಬಂತು ಅಂದ್ರೆ ಪೃಥ್ವಿ ಬರ್ತಿದ್ರು, ಬಹಳ ಸಲ ಭೇಟಿ ಮಾಡಿದ್ದೇನೆ. ತುಂಬಾ ನೋವಾಗುತ್ತಿದೆ. ಅವರ ತಂದೆ ತಾಯಿಗೆ ಏನು ಹೇಳಲಿ , ಹೇಗೆ ಸಮಾಧಾನ ಮಾಡಬೇಕು ಅಂತ ಗೊತ್ತಾಗ್ತಿಲ್ಲ. ಹೆಲ್ಮೆಟ್ ಹಾಕಿಕೊಂಡು ಬೈಕ್ ಚಾಲನೆ ಮಾಡಬೇಕು. ಪೃಥ್ವಿ ತಂದೆ ತಾಯಿ ಬಹಳ ಧೈರ್ಯದ ನಿರ್ಧಾರ ತೆಗೆದುಕೊಂಡಿದ್ದಾರೆ.
ಆತನ ಅಂಗಾಂಗಗಳನ್ನು ದಾನ ಮಾಡಲು ಮುಂದಾಗಿದ್ದಾರೆ. ಎಲ್ಲಿದ್ದರೂ ಆತನ ಆತ್ಮಕ್ಕೆ ಶಾಂತಿ ಸಿಗಲಿ, ಎಲ್ಲರಲ್ಲೂ ನನ್ನ ವಿನಂತಿ ಏನು ಅಂದ್ರೆ, ದಯವಿಟ್ಟು ಹೆಲ್ಮೆಟ್ ಧರಿಸಿ, ನಮ್ಮ ಅಜ್ಜಿನ ಆಸ್ಪತ್ರೆಯಲ್ಲಿ ನೋಡಿದ ಮೇಲೆ ಇನ್ಮುಂದೆ ಆಸ್ಪತ್ರೆಗೆ ಹೋಗೋದು ಬೇಡ ಅಂದುಕೊಂಡಿದ್ದೆ. ಆದರೆ ಈಗ ಬರುವಂತಾಯಿತು” ಎಂದಿದ್ದಾರೆ.
ಇನ್ನು ಮಗನ ಆಸ್ಪತ್ರೆ ಖರ್ಚಿಗಾಗಿ ಪೃಥ್ವಿರಾಜ್ ತಂದೆ ಜಗದೀಶ್ ಸಾಲ ಮಾಡಿದ್ದರು. ಇದೀಗ ನಟ ಧ್ರುವ ಸರ್ಜಾ 5 ಲಕ್ಷ ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ..
Dhruva Sarja help’s his fan’s family who who died in bike accident







