Man Attacked Girl : ಮದುವೆಯಾಗಲು ನಿರಾಕರಿಸಿದ್ದಕ್ಕೆ 16 ವರ್ಷದ ಬಾಲಕಿ ಮೇಲೆ 47 ವರ್ಷದ ವ್ಯಕ್ತಿಯಿಂದ ಹಲ್ಲೆ…
ಮದುವೆಯಾಗಲು ನಿರಾಕರಿಸಿದ 16 ವರ್ಷದ ಬಾಲಕಿ ಮೇಲೆ 47 ವರ್ಷದ ವ್ಯಕ್ತಿ ಕೂದಲಿಡಿದು ನಡು ರಸ್ತೆಯಲ್ಲಿ ಎಳೆದಾಡಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಛತ್ತೀಸ್‌ಗಢ ರಾಯ್‌ಪುರದಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಪೊಲೀಸರ ಪ್ರಕಾರ, ಓಂಕಾರ್ ತಿವಾರಿ ಅಲಿಯಾಸ್ ಮನೋಜ್ ಎಂಬ ವ್ಯಕ್ತಿ ರಾಯಪುರದ ಗುಧಿಯಾರಿ ಪ್ರದೇಶದಲ್ಲಿ ಅಂಗಡಿಯೊಂದನ್ನ ನಡೆಸುತ್ತಿದ್ದಾನೆ. 16 ವರ್ಷದ ಈ ಹುಡುಗಿ ಈತನ ಬಳಿ ಕೆಲದಿನಗಳಿಂದ ಕೆಲಸ ಮಾಡುತ್ತಿದ್ದಾರೆ.
ಕಾರಣಾಂತರಗಳಿಂದ ಈ ಹುಡುಗಿ ಕೆಲಸ ಬಿಡುತ್ತಿರುವುದಾಗಿ ಹೇಳಿದ್ದಾಳೆ. ಅದಕ್ಕೆ ಬಾಲಕಿ ಈತ ಶನಿವಾರ ಸಂಜೆ ಬಾಲಕಿಯ ಮನೆಗೆ ಹೋಗಿ ಮದುವೆವಾಗುವುದಾಗಿ ಪ್ರಸ್ಥಾಪಿಸಿದ್ದಾನೆ. ಇದಕ್ಕೆ ಬಾಲಕಿ ಮತ್ತು ಆಕೆಯ ತಾಯಿ ಇದಕ್ಕೆ ನಿರಾಕರಿಸಿದ್ದಾರೆ. ಇದರಿಂದ ಕೋಪಗೊಂಡ ಆತ ಬಾಲಕಿಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ. ಅಷ್ಟಕ್ಕೆ ನಿಲ್ಲದೆ ಆಕೆಯ ತಲೆಗೂದಲನ್ನ ಹಿಡಿದು ರಸ್ತೆ ಎಳೆದೊಯ್ದಿದ್ದಾನೆ. ಈ ಅಮಾನವೀಯ ಘಟನೆಯನ್ನ ಕೆಲವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ವೈರಲ್ ಆದ ಬಳಿಕ ವಿಷಯ ಪೊಲೀಸರ ಗಮನಕ್ಕೆ ಬಂದಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಬಾಲಕಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ರಾಯ್‌ಪುರದ ಹಿರಿಯ ಎಸ್ಪಿ ಪ್ರಶಾಂತ್ ಅಗರ್ವಾಲ್ ಹೇಳಿದ್ದಾರೆ. ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Man Attacked Girl: A 16-year-old girl was attacked by a 47-year-old man for refusing to marry her.








