Earthquake In Turkey : ಟರ್ಕಿಯಲ್ಲಿ ನಿಲ್ಲದ ಭೂಕಂಪ – ಕಳೆದ ರಾತ್ರಿ ಮತ್ತೆರೆಡು ಸಾರಿ ಕಂಪಿಸಿದ ಭೂಮಿ…
Earthquake In Turkey : ಟರ್ಕಿ ಮತ್ತು ಸಿರಿಯಾ ಮೇಲೆ ಪ್ರಕೃತಿ ಕೋಪ ಇನ್ನೂ ತಣಿದಿಲ್ಲ. ಕಳೆದ 15 ದಿನಗಳ ದುರಂತದಿಂದ ಚೇತರಿಸಿಕೊಳ್ಳುವ ಮುನ್ನವೆ ಮತ್ತೊಮ್ಮೆ ಟರ್ಕಿಯಲ್ಲಿ ಭೂಕಂಪಗಳ ಸರಣಿ ಸಂಭವಿಸಿದೆ.
ನಿನ್ನೆ ರಾತ್ರಿ ಕೆಲವೇ ಗಂಟೆಗಳ ಅವಧಿಯಲ್ಲಿ ಒಂದಲ್ಲ ಎರಡಲ್ಲ 32 ಭಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದಿಂದಾಗಿ ಅಲ್ಲಿನ ಜನ ತತ್ತರಿಸಿ ಹೋಗಿದ್ದು, ಜೀವ ಕೈಯಲ್ಲಿ ಹಿಡಿದು ಓಡಾವಂತಾಗಿದೆ.
ಇತ್ತೀಚಿನ ಭೂಕಂಪನದಿಂದಾಗಿ ಮೂರು ಜನರು ಸಾವನ್ನಪ್ಪಿದ್ದು, 213 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಟರ್ಕಿಯ ಹಟೇ ಪ್ರಾಂತ್ಯದಲ್ಲಿ 6.4 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದ್ದು, ಇದಾದ ಬಳಿಕ ಮೂರು ನಿಮಿಷದಲ್ಲಿ ಮತ್ತೊಂದು ಭೂಕಂಪ ಸಂಭವಿಸಿದೆ.
ಎರಡನೇ ಬಾರಿಗೆ ಭೂಕಂಪದ ತೀವ್ರತೆ 5.8ರಷ್ಟಿತ್ತು. ಇದರಿಂದಾಗಿ ಕಟ್ಟಡಗಳು ಕುಸಿದು ನೆಲಸಮವಾಗಿವೆ. ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ.
ಮೊದಲ ಭೂಕಂಪ 16.7 ಕಿಮೀ ಆಳದಲ್ಲಿ ಸಂಭವಿಸಿದೆ, ಎರಡನೇ ಕಂಪನ 7 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Earthquake In Turkey: Earthquake that did not stop in Turkey – the earth shook twice last night…








