15 years of IPL : ಕೊಹ್ಲಿ, ರೋಹಿತ್, ಎಬಿಡಿ ಗೆ ಇನ್ಕ್ರೆಡಿಬಲ್ ಪ್ರಶಸ್ತಿ ನೀಡಿದ ಸ್ಟಾರ್ ಸ್ಪೋರ್ಟ್ಸ್….
2008 ರಿಂದ 2023ರ ಇಲ್ಲಿಯವರೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಲೀಗ್ ನ 15 ಆವೃತ್ತಿಯನ್ನ ನಾವು ಆಡುತ್ತಿದ್ದೇವೆ. ಭಾರತೀಯ ಕ್ರಿಕೆಟ್ ಕ್ಯಾಲೆಂಡರ್ ನಲ್ಲಿ IPL ಅವಿಭಾಜ್ಯ ಅಂಗವಾಗಿದೆ. 2023 ರ ಆವೃತ್ತಿಯಲ್ಲಿ ದೂರದರ್ಶನ ಪ್ರಸಾರ ಹಕ್ಕುಗಳನ್ನ ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ 15ನೇ ವರ್ಷಕ್ಕೆ ಕಾಲಿಟ್ಟ ಕಾರಣಕ್ಕೆ IPL ಇತಿಹಾಸದ ಮೇಲೆ ಹಲವು ಪ್ರಶಸ್ತಿಗಳನ್ನ ನೀಡಲು ಮುಂದಾಗಿದೆ.
“ಇನ್ಕ್ರೆಡಿಬಲ್ ಪ್ರೀಮಿಯರ್ ಲೀಗ್ ಅವಾರ್ಡ್ಸ್” ಎಂಬ ಹೆಸರಿನ ಅಡಿಯಲ್ಲಿ ಅತ್ಯುತ್ತಮ ನಾಯಕ, ಬ್ಯಾಟರ್ ಮತ್ತು ಬೌಲರ್ ಮತ್ತು ಅತ್ಯುತ್ತಮ ಪ್ರಭಾವಿ ಆಟಗಾರ ಪ್ರಶಸ್ತಿಯನ್ನ ನೀಡಲಾಯಿತು.
ಐದು ಭಾರಿ ತಂಡವನ್ನ ಚಾಂಪಿಯನ್ ಪಟ್ಟಕ್ಕೇರಿಸಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಗೆ ಇನ್ಕ್ರೆಡಿಬಲ್ ಕ್ಯಾಪ್ಟನ್ ಪ್ರಶಸ್ತಿಯನ್ನ ನೀಡಲಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿದ್ದ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಗೆ ಸ್ಟಾರ್ ಸ್ಪೋರ್ಟ್ಸ್ ಇನ್ಕ್ರೆಡಿಬಲ್ ಬ್ಯಾಟರ್ ಪ್ರಶಸ್ತಿಯನ್ನ ನೀಡಿದೆ.
ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಇನ್ಕ್ರೆಡಿಬಲ್ ಬೌಲರ್ ಪ್ರಶಸ್ತಿಯನ್ನ ಪಡೆದಿದ್ದಾರೆ.
ಐಪಿಎಲ್ನಲ್ಲಿ ಅತ್ಯಂತ ದೈತ್ಯ ಮತ್ತು ಹೊಡಿಬಡಿ ಆಟಗಾರ ಆಂಡ್ರೆ ರಸೆಲ್ Incredible Overall Impact ಪ್ರಶಸ್ತಿಯನ್ ಗೆದ್ದಿದ್ದಾರೆ.
ಒಂದು ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ Incredible Batting Performance in a Season 2016 ಪ್ರಶಸ್ತಿಯನ್ನ ವಿರಾಟ್ ಕೊಹ್ಲಿ ಗೆ ನೀಡಲಾಗಿದೆ.
ಒಂದು ಋತುವಿನಲ್ಲಿ ಇನ್ಕ್ರೆಡಿಬಲ್ ಬೌಲಿಂಗ್ ಪ್ರದರ್ಶನ ಪ್ರಶಸ್ತಿಯನ್ನ 2012 ಪ್ರದರ್ಶನದ ಆಧಾರದ ಮೇಲೆ ಸುನಿಲ್ ನರೈನ್ ಗೆ ನೀಡಲಾಗಿದೆ.
15 years of IPL: Kohli, Rohit, ABD given incredible award by Star Sports…








