Pruthwi Sha – Sapana : ಜಾಮೀನು ಸಿಗುತ್ತಲೇ ಪೃಥ್ವಿ ಸಾ ವಿರುದ್ಧ ದೂರು ದಾಖಲಿಸಿದ ಸಪ್ನಾ..!!
ಇತ್ತೀಚೆಗ ಟೀಮ್ ಇಂಡಿಯಾ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಹಾಗೂ ಭೋಜ್ ಪುರಿ ನಟಿ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ನಡುವಿನ ಗಲಾಟೆ ಸಾಕಷ್ಟು ಸದ್ದು ಮಾಡಿದೆ..
ಫೋಟೋ ಕ್ಲಿಕ್ಕಿಸಿಕೊಳ್ಳಲು ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಕಾರಿನ ಮೇಲೆ ಸಪ್ನಾ ಗಿಲ್ ಹಾಗೂ ಸ್ನೇಹಿತರು ದಾಳಿ ನಡೆಸಿದ್ದಾಗಿ ಆರೋಪಿಸಿ ಪೃಥ್ವಿ ಶಾ ಸ್ನೇಹಿತರು ಓಶಿವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಸಪ್ನಾ ಗಿಲ್ ಅನ್ನು ಬಂಧಿಸಿ್ದರು..
ಇದೀಗ ಜಾಮೀನಿಮನ ಮೇಲೆ ಹೊರಬಂದಿದ್ದಾರೆ ಸಪ್ನಾ.. ಆದ್ರೆ ಜೈಲಿನಿಂದ ಹೊರ ಬಂದವರೇ ಪೃಥ್ವಿ ಸಾ ವಿರುದ್ಧ ಕೇಸ್ ದಾಖಲಿಸಿದ್ದಾರೆ…
ಹೌದು..!
ಸಪ್ನಾ ಗಿಲ್ ಪರ ವಕೀಲ ಕಾಶಿಫ್ ಅಲಿ ಖಾನ್ ಪೃಥ್ವಿ ಶಾ ಸಾರ್ವಜನಿಕವಾಗಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರ ವಿರುದ್ಧ ಸಾರ್ವಜನಿಕ ಅಸಭ್ಯತೆಯ ಪ್ರಕರಣ ದಾಖಲಿಸಿದ್ದಾರೆ.
ಪೃಥ್ವಿ ಶಾ ಅವರು ಸಾರ್ವಜನಿಕ ಅಸಭ್ಯತೆ ಮತ್ತು ದೈಹಿಕ ಹಾನಿಯನ್ನುಂಟು ಮಾಡಿದ್ದಾರೆ ಎಂದು ಸಪ್ನಾ ಗಿಲ್ ಪರ ವಕೀಲರು ಹೇಳಿದ್ದಾರೆ.
ಸಪ್ನಾ ಗಿಲ್ ಮೇಲೆ ಹರಿತವಾದ ಆಯುಧದಿಂದ ಪೃಥ್ವಿ ಹಲ್ಲೆ ನಡೆಸಿದ್ದಾರೆ ಎಂದೂ ಕೂಡ ಆರೋಪ ಹೊರಿಸಿದ್ದಾರೆ.
ಪೃಥ್ವಿ ಶಾ ಮತ್ತು ಇತರರ ವಿರುದ್ಧ ಸೆಕ್ಷನ್ 34, 120 ಬಿ, 144, 146, 148, 149, 323, 324, 351, 354 ಮತ್ತು 509ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಪ್ನಾ ಪರ ವಕೀಲರು ತಿಳಿಸಿದ್ದಾರೆ.
Pruthwi Sha – Sapana , after getting bail actress filed case against pruthwi sha








