Kangana : ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೆಪೋಟಿಸಮ್ ಪ್ರಭಾವಿತ – ಪ್ರಶಸ್ತಿಗೆ ಅರ್ಹರು ಯಾರೆಂದು ತನ್ನದೇ ಪಟ್ಟಿ ರಿಲೀಸ್..!!
ಕಂಗನಾ ರಣೌತ್….
ಬಾಲಿವುಡ್ ನ ಡೇರಿಂಗ್ ನಟಿ…
ಇವರ ಬಗ್ಗೆ ಪ್ರತ್ಯೇಕವಾಗಿ ಹೇಳೋದೇ ಬೇಡ..
ತಮಗೆ ತಪ್ಪು ಅನ್ಸಿದ್ದನ್ನ ಮರು ವಿಚಾರ ಮಾಡದೇ ನೇರವಾಗಿ ಹೇಳುವ ‘ಕ್ವೀನ್’..
ವಿವಾದಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ , ರಾಜಕಾರಣವಾಗಿಯೂ ಸಾಕಷ್ಟು ಟೀಕೆ ವಾಗ್ದಾಳಿಗಳನ್ನ ಮಾಡುತ್ತಾ ಇರುತ್ತಾರೆ..
ಬಾಲಿವುಡ್ ನ ದೊಡ್ಡ ದೊಡ್ಡ ಮಂದಿಯ ಮೇಲೆಯೇ ಆರೋಪ ಮಾಡುತ್ತಾ , ಆಗಾಗ ಬಾಲಿವುಡ್ ಮಾಫಿಯಾ , ನೆಪೋಟಿಸಮ್ ವಿರುದ್ಧ ಕಿಡಿಕಾರುತ್ತಿರುತ್ತಾರೆ..
ಇದೀಗ ‘ ಮಣಿಕರ್ಣಿಕಾ’ ಈ ವರ್ಷದ ‘ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ’ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದಾರೆ..
ಅಷ್ಟೇ ಅಲ್ಲ ಪ್ರಶಸ್ತಿ ಪಡೆದವರನ್ನ ತಿರಸ್ಕರಿಸಿ , ತಮ್ಮ ಪ್ರಕಾರ ಈ ಪ್ರಶಸ್ತಿಗೆ ಅರ್ಹರಾದವರ ಲಿಸ್ಟ್ ಹಂಚಿಕೊಂಡಿದ್ದಾರೆ..
ಕಂಗನಾ ಅವರು ತಯಾರಿಸಿರುವ ಪಟ್ಟಿ ಹೀಗಿದೆ..
ಅತ್ಯುತ್ತಮ ನಟ – ರಿಷಬ್ ಶೆಟ್ಟಿ
ಅತ್ಯುತ್ತಮ ಸಿನಿಮಾ – ಕಾಂತಾರ
ಅತ್ಯುತ್ತಮ ನಿರ್ದೇಶಕ – ಎಸ್ ಎಸ್ ರಾಜಮೌಳಿ (RRR)
ಅತ್ಯುತ್ತಮ ಪೋಷಕ ನಟ – ಅನುಪಮ್ ಖೇರ್ (ಕಾಶ್ಮೀರ್ ಫೈಲ್ಸ್)
ಅತ್ಯುತ್ತಮ ಪೋಷಕ ನಟಿ – ಟಬು (ದೃಶ್ಯಂ 2, ಭೂಲ್ ಭುಲಯ್ಯ 2)
ಅಂದ್ಹಾಗೆ ಕಂಗನಾ ಕಾಂತಾರಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ..
ಇಲ್ಲಿ ಕಂಗನಾ ಪರೋಕ್ಷವಾಗಿ ಆಲಿಯಾ ಭಟ್ – ರಣಬೀರ್ ಕಪೂರ್ ಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಆಕ್ರೋಶ ಹೊರಹಾಕಿರುವುದು ಗೊತ್ತಾಗಿದೆ..
ಇನ್ನೂ ತಮ್ಮದೇ ಲಿಸ್ಟ್ ಹಂಚಿಕೊಂಡ ಕಂಗನಾ ದಾದಾ ಸಾಹೇಬ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿಯನ್ನು ನೆಪೋಟಿಸಂ ಎಫೆಕ್ಟ್ ಎಂದು ಕರೆದು ಅಸಮಾಧಾನ ಹೊರಹಾಕಿದ್ದಾರೆ..
ಈ ಬಾರಿ ಅತ್ಯುತ್ತಮ ನಟ ರಣಬೀರ್ ಕಪೂರ್, ಅತ್ಯುತ್ತಮ ನಟಿ ಆಲಿಯಾ ಭಟ್ ಪ್ರಶಸ್ತಿಯನ್ನು ನೀಡಿದ್ದಾರೆ. ಇದನ್ನ ಕಂಗನಾ ತಿರಸ್ಕರಿಸಿದ್ದಾರೆ..
Kangana , calls dada saheb phalke award is influenced by nepostism , Actress shares her own Award winners list








