Chhattisgarh : ಆರತಕ್ಷತೆಗೂ ಮುನ್ನ ನವದಂಪತಿ ಸಾವು ; ಪತ್ನಿಯನ್ನ ಕೊಂದು ತಾನು ಆತ್ಮಹತ್ಯೆ….
ಮದುವೆ ಅರತಕ್ಷತೆಗೂ ಮುನ್ನ ನವವಿವಾಯಿತ ದಂಪತಿಗಳು ತಮ್ಮ ಮನೆಯ ಕೊಠಡಿಯೊಳಗೆ ಶವವಾಗಿ ಪತ್ತೆಯಾಗಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದಲ್ಲಿ ನಡೆದಿದೆ.
ಇಬ್ಬರ ದೇಹದ ಮೇಲೂ ಚಾಕುವಿನಿಂದ ಇರಿದಿರುವ ಗಾಯಗಳಾಗಿವೆ. ದಂಪತಿಗಳ ನಡುವೆ ಜಗಳ ನಡೆದಿದ್ದು, ಪತ್ನಿಯನ್ನ ಚಾಕುವಿನಿಂದ ಇರಿದು ಕೊಲೆಗೈದಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ. ಮಂಗಳವಾರ ತಡರಾತ್ರಿ ತಿಕ್ರಪಾರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್‌ನಗರದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಸ್ಲಾಂ (24) ಮತ್ತು ಕಹ್ಕಶಾ ಬಾನೊ (22) ಭಾನುವಾರ ವಿವಾಹವಾಗಿದ್ದು, ಮಂಗಳವಾರ ರಾತ್ರಿ ಅವರ ವಿವಾಹ ಆರತಕ್ಷತೆ ನಡೆಯಬೇಕಿತ್ತು. ತಮ್ಮ ಕೊಠಡಿಯೊಳಗೆ ರೆಡಿಯಾಗುತ್ತಿದ್ದಾಗ ವರನ ತಾಯಿ ವಧುವಿನ ಕಿರುಚಾಟವನ್ನು ಕೇಳಿ ರೂಮ್ ನತ್ತ ಧಾವಿಸಿದ್ದಾರೆ. ರೂಮ್ ನ ಒಳಗಡೆಯಿಂದ ಬೀಗ ಹಾಕಲಾಗಿದ್ದು, ಕಿಟಕಿಯಿಂದ ನೋಡಿದಾಗ ವಧು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಾಗಿಲು ಒಡೆದು ಒಳನುಗ್ಗಿ ಇಬ್ಬರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳದಿಂದ ಚಾಕು ವನ್ನ ವಶಪಡಿಸಿಕೊಳ್ಳಲಾಗಿದೆ. ”ದಂಪತಿಗಳ ನಡುವೆ ವಾಗ್ವಾದ ನಡೆದಿದ್ದು, ಪತಿ ಪತ್ನಿಗೆ ಚಾಕುವಿನಿಂದ ಹಲ್ಲೆ ನಡೆಸಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
Newly-Married Couple Found Dead Before Wedding Reception In Chhattisgarh








