INDvsAus ಬಾರ್ಡರ್ –ಗಾವಸ್ಕರ್ ಟ್ರೋಫಿಯಿಂದ ಹೊರ ನಡೆದ ವಾರ್ನರ್
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ಡೇವಿಡ್ ವಾರ್ನರ್ ಗಾಯದ ಸಮಸ್ಯೆಗೆ ಗುರಿಯಾಗಿ ಬಾರ್ಡರ್ ಗಾವಸ್ಕರ್ ಟ್ರೋಫಿಯಿಂದ ಹೊರ ನಡೆದಿದ್ದಾರೆ.
ಮೊನ್ನೆ ದೆಹಲಿ ಟೆಸ್ಟ್ ಪಂದ್ಯದ ವೇಳೆ ಡೇವಿಡ್ ವಾರ್ನರ್ ಕೆಲವೆ ನಿಮಿಷಗಳ ಅಮತದಲ್ಲಿ 2 ಬಾರಿ ಗಾಯಗೊಂಡರು. ಮೊಹ್ಮದ್ ಸಿರಾಜ್ ಎಸೆದ ಚೆಂಡು ವಾರ್ನರ್ ಅವರ ಮೊಣಕೈಗೆ ಬಡಿಯಿತು. ಇದರ ಪರಿಣಾಮ ಹೇರ್ ಲೈನ್ ಫ್ರಾಕ್ಚರ್ ಗೆ ಗುರಿಯಾಗಿ ರೆನ್ಶಾ ಕಣಕ್ಕಿಳಿಯಬೇಕಾಯಿತು.
ಮುಂದಿನ ಎರಡೂ ಟೆಸ್ಟ್ ಪಂದ್ಯಗಳಿಂದ ಹೊರ ನಡೆದಿರುವ ವಾರ್ನರ್ ತವರಿಗೆ ಮರಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.
ತಾರಾ ಬ್ಯಾಟರ್ ಡೇವಿಡ್ ವಾರ್ನರ್ ಪುರ್ನವಸತಿಗೆ ತೆರೆಳಲಿದ್ದಾರೆ. ಚೇತರಿಸಿಕೊಂಡರೆ ಟೆಸ್ಟ್ ಸರಣಿ ನಂತರ ಏಕದಿನ ಸರಣಿ ಆಡಲು ಮತ್ತೆ ಭಾರತಕ್ಕೆ ತೆರೆಳಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಆದರೆ ಆಸ್ಟ್ರೇಲಿಯಾ ತಂಡದ ಕೋಚ್ ಆ್ಯಂಡ್ರೀವ್ ಮೆಕ್ ಡೋನಾಲ್ಡ್,
ಡೇವಿಡ್ ವಾರ್ನರ್ ತವರಿಗೆ ಮರಳುವ ಬಗ್ಗೆ ಮಂಡಳಿ ಅವಸರ ಮಾಡಿಲ್ಲ ಮೂರನೆ ಟೆಸ್ಟ್ ಪಂದ್ಯ ನೋಡಿಕೊಂಡು ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.
INDvsAus , border gavaskar trophy , warner out