Amit Shah : ನಿತೀಶ್ ಕುಮಾರ್ ಗೆ ಬಿಜೆಪಿಯ ಬಾಗಿಲು ಶಾಶ್ವತವಾಗಿ ಮುಚ್ಚಿದೆ – ಅಮಿತ್ ಶಾ…
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಹುದ್ದೆಗೇರುವ ಆಸೆಯಿಂದ ಬಿಜೆಪಿಯನ್ನು ತ್ಯಜಿಸಿ ಕಾಂಗ್ರೆಸ್ ಮತ್ತು ಆರ್‌ಜೆಡಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಆರೋಪಿಸಿದ್ದಾರೆ.
ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗೃಹಸಚಿವರು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಮುಂದಿನ ಮುಖ್ಯಮಂತ್ರಿ ಮಾಡಲು ಜೆಡಿಯು ವರಿಷ್ಠರು ಒಪ್ಪಿಕೊಂಡಿದ್ದಾರೆ. ಹಾಗೆ ಮಾಡಲು ಉದ್ದೇಸಿದಾಗ ಘೋಷಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ನಿತೀಶ್ ಕುಮಾರ್ ಅವರು ಬಿಹಾರವನ್ನ ‘ಜಂಗಲ್ ರಾಜ್’ಗೆ ತಳ್ಳಿದ್ದಾರೆ. ಇದಕ್ಕಾಗಿ ಹಿಂದಿನ ಕಾಂಗ್ರೆಸ್ ಮತ್ತು ಆರ್‌ಜೆಡಿ ಆಡಳಿತವನ್ನು ದೂಷಿಸುತ್ತಿದ್ದರು. ಮಾಜಿ ಮಿತ್ರಪಕ್ಷದ ಫ್ಲಿಪ್ ಫ್ಲಾಪ್ ಗೆ ಬಿಜೆಪಿ ಅಸಹ್ಯಗೊಂಡಿದೆ. ನಿತೀಶ್ ಕುಮಾರ್ ಗೆ ಬಿಜೆಪಿಯ ಬಾಗಿಲುಗಳು ಶಾಶ್ವತವಾಗಿ ಮುಚ್ಚಲ್ಪಟ್ಟಿವೆ ಎಂದು ಅಮಿತ್ ಶಾ ಹೇಳಿದ್ದಾರೆ.
ಜೈ ಪ್ರಕಾಶ್ ನಾರಾಯಣ್ ಅವರ ಕಾಲದಿಂದಲೂ ಕಾಂಗ್ರೆಸ್ ಮತ್ತು ಜಂಗಲ್ ರಾಜ್ ವಿರುದ್ಧ ಹೋರಾಡಿದ ನಿತೀಶ್ ಕುಮಾರ್ ಈಗ ಜಂಗಲ್ ರಾಜ್‌ನ ಪ್ರವರ್ತಕ ಲಾಲು ಪ್ರಸಾದ್ ಅವರ ಮಡಿಲಲ್ಲಿ ಮತ್ತು ಸೋನಿಯಾ ಅವರ ಪಾದದ ಮೇಲೆ ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
BJP’s doors forever closed for Nitish Kumar: Amit Shah