Narendra Modi : ಕರ್ನಾಟಕದ ನೆಲ “ಏಕ್ ಭಾರತ್ ಶ್ರೇಷ್ಠ ಭಾರತ್” ಚೈತನ್ಯವನ್ನ ಸಾರುತ್ತದೆ…
ಕುವೆಂಪು ಅವರು `ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂದು ಅದ್ಭುತವಾಗಿ ಹೇಳಿದ್ದಾರೆ. ಈ ಗೀತೆಯ ಮೂಲಕವೇ ಭಾರತ ಮಾತೆಯ ಮಗಳು ಕರ್ನಾಟಕ ಮಾತೆ ಎಂದು ಹೇಳಿದ್ದಾರೆ. `ಏಕ್ ಭಾರತ್ ಶ್ರೇಷ್ಠ ಭಾರತ್’ ಪರಿಕಲ್ಪನೆಯೂ ಇದರಲ್ಲಿದೆ ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.
ಕರ್ನಾಟಕ ಸಂಘದ ಅಮೃತ ಮಹೋತ್ಸವದಲ್ಲಿ ಏಕ್ ಭಾರತ್ ಶ್ರೇಷ್ಠ ಭಾರತ್ ಅನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ, ರಾಷ್ಟ್ರಕವಿ ಕುವೆಂಪು ಅವರ ಎಲ್ಲಾದರು ಇರು, ಎಂತಾದರು ಇರು, ನೀನು ಕನ್ನಡವಾಗಿರು’ ಅಮರ ವಾಣಿಯೊಂದಿಗೆ ಮಾತು ಆರಂಭಿಸಿದರು.
ನನಗೆ ಲಂಡನ್ ನಲ್ಲಿ ಅವರ ಪ್ರತಿಮೆ ಉದ್ಘಾಟಿಸುವ ಅವಕಾಶವೂ ಸಿಕ್ಕಿತು. ಬೇರೆ ಬೇರೆ ಭಾಷೆಯಲ್ಲಿ ವಚನಗಳ ಪುಸ್ತಕ ಬಿಡುಗಡೆ ಮಾಡುವ ಅವಕಾಶವೂ ಸಿಕ್ಕಿತ್ತು ಎಂದು ಪ್ರಧಾನಿ ಮೋದಿ ಸ್ಮರಿಸಿದರು. ವಚನಗಳಲ್ಲಿ ಬಸವಣ್ಣನವರ ಪ್ರಭಾವ ಇದೆ. ಕರ್ನಾಟಕದ ಅಭಿವೃದ್ಧಿಗೆ ಆದ್ಯತೆಯಾಗಿದೆ. ಮೊದಲು ಕರ್ನಾಟಕದಲ್ಲಿ ಸರ್ಕಾರ ಮಾಡಿ ಅಲ್ಲಿಂದ ಹಣ ಹೊರಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಈಗ ಜನರ ಅಭಿವೃದ್ಧಿಗೆ ಬಳಕೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಭಾಷಣದಲ್ಲಿ ಹೇಳಿದರು.
Narendra Modi: The land of Karnataka epitomizes the spirit of “Ek Bharat Shrestha Bharat”…