Women T20 World Cup Final : ಬಲಿಷ್ಠ ಆಸ್ಟ್ರೇಲಿಯಾ ಎದುರು ಚೊಚ್ಚಲ ಕಪ್ ಗೆಲ್ಲಲು ಆಫ್ರಿಕಾ ಹೋರಾಟ…
ರೋಚಕ ಜಯದೊಂದಿಗೆ ದಕ್ಷಿಣ ಆಫ್ರಿಕಾ ತಂಡ ಮೊದಲ ಬಾರಿಗೆ ಮಹಿಳಾ ಟಿ20 ವಿಶ್ವಕಪ್ನಲ್ಲಿ ಫೈನಲ್ ತಲುಪಿದೆ. ಪೈನಲ್ ಪಂದ್ಯ ಇಂದು ಸಂಜೆ ದಕ್ಷಿಣ ಆಫ್ರಿಕಾದ ಕೇಪ್ ಟೌನ್ನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ ನಡೆಯಲಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠ ಆಸ್ಟ್ರೇಲಿಯ ತಂಡವನ್ನ ಎದುರು ಹಾಕಿಕೊಳ್ಳುತ್ತಿದೆ.
ದಕ್ಷಿಣ ಆಫ್ರಿಕಾ ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. ಇಲ್ಲಿಯವರೆಗೆ ಪುರುಷರ ಮತ್ತು ಮಹಿಳಾ ತಂಡಗಳು ಟಿ 20 ವಿಶ್ವಕಪ್ ಗೆದ್ದಿಲ್ಲ. ಮಹಿಳಾ ತಂಡ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುತ್ತದೆ ಎಂದು ದೇಶದ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಟಿ20 ವಿಶ್ವಕಪ್ನಲ್ಲಿ ಇದುವರೆಗೆ ಆಸೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಆರು ಪಂದ್ಯಗಳು ನಡೆದಿವೆ. ಈ ಎಲ್ಲದರಲ್ಲೂ ಆಸ್ಟ್ರೇಲಿಯಾ ತಂಡವೇ ಗೆದ್ದಿದೆ. ಇಂದು ನಡೆದ ಫೈನಲ್ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆದ್ದು ಇತಿಹಾಸ ಸೃಷ್ಟಿಸಲು ಸೌತ್ ಆಫ್ರಿಕಾ ಸಜ್ಜಾಗಿದೆ.
ಆಸ್ಟ್ರೇಲಿಯಾ ಈಗಾಗಲೇ ಏಳು ಬಾರಿ ಟಿ20 ವಿಶ್ವಕಪ್ನಲ್ಲಿ ಫೈನಲ್ಗೆ ತಲುಪಿದೆ. ಈ ಪೈಕಿ ಐದು ಬಾರಿ ಕಪ್ ಗೆದ್ದಿದೆ. ಕಳೆದ ವರ್ಷ ಭಾರತ ತಂಡದ ವಿರುದ್ಧ ಗೆದ್ದಿದ್ದ ಆಸೀಸ್ ಐದನೇ ಬಾರಿಗೆ ಟಿ20 ಮಾದರಿಯಲ್ಲಿ ವಿಶ್ವ ಚಾಂಪಿಯನ್ ಆಗಿತ್ತು. ಇಂದಿನ ಪಂದ್ಯದಲ್ಲೂ ಗೆಲ್ಲುವ ಮೂಲಕ ಆಸೀಸ್ ಆರನೇ ಬಾರಿಗೆ ಗೆಲುವಿನ ರೂವಾರಿ ಎನಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಬಲಿಷ್ಠ ಆಸೀಸ್ ತಂಡವನ್ನು ಸೋಲಿಸುವುದು ಆಫ್ರಿಕಾ ತಂಡಕ್ಕೆ ಕಷ್ಟ. ಅದರಲ್ಲಿ ಆಸೀಸ್ ಪ್ರಸಕ್ತ ಟೂರ್ನಿಯಲ್ಲಿ ಒಂದೂ ಪಂದ್ಯವನ್ನ ಸೋತಿಲ್ಲ. ಆ ತಂಡದ ಆಟಗಾರರು ಸೂಪರ್ ಫಾರ್ಮ್ ನಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಲು ಅದ್ಭುತ ಪ್ರತಿಭೆ ತೋರಬೇಕು.
ಇಂಗ್ಲೆಂಡ್ ವಿರುದ್ಧ ಸೆಮಿಸ್ ನಲ್ಲಿ ಹೋರಾಟದ ಉತ್ಸಾಹದಿಂದ ಗೆದ್ದಿರುವ ದಕ್ಷಿಣ ಆಫ್ರಿಕಾ ಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲ್ಲಬೇಕಾದರೆ ಇನ್ನೂ ಉತ್ತಮ ಪ್ರದರ್ಶನ ನೀಡಬೇಕಿದೆ. ಒಂದು ವೇಳೆ ದಕ್ಷಿಣ ಆಫ್ರಿಕಾ ಫೈನಲ್ನಲ್ಲಿ ಗೆದ್ದರೆ ಪುರುಷ ಮತ್ತು ಮಹಿಳಾ ತಂಡಗಳಲ್ಲಿ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.
Women T20 World Cup Final : Africa fight to win the first cup against strong Australia…