Virat Kohli : ಅಜಿಂಕ್ಯಾ ರಹಾನೆ ದಾಖಲೆ ಮೇಲೆ ಕೊಹ್ಲಿ ಕಣ್ಣು..!!
ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್ ಪಂದ್ಯಕ್ಕೆ ಸಜ್ಜಾಗಿರುವ ಟೀಮ್ ಇಂಡಿಯಾದ ʼರನ್ ಮಷಿನ್ʼ ವಿರಾಟ್ ಕೊಹ್ಲಿ, ಇಂಧೋರ್‌ನಲ್ಲಿ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ.
ಇಂಧೋರ್‌ನ ಹೊಲ್ಕರ್ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ರೆಕಾರ್ಡ್ ಹೊಂದಿದ್ದಾರೆ. ಹೊಲ್ಕರ್ ಅಂಗಳದಲ್ಲಿ ಗರಿಷ್ಠ ರನ್‌ಗಳಿಸಿರುವ ಬ್ಯಾಟರ್‌ಗಳ ಪಟ್ಟಿಯನ್ನ ನೋಡಿದರೆ, ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇಂಧೋರ್‌ನಲ್ಲಿ ಈವರೆಗೂ ಆಡಿರುವ ಎರಡು ಟೆಸ್ಟ್‌ಗಳಲ್ಲಿ ವಿರಾಟ್, 76ರ ಬ್ಯಾಟಿಂಗ್ ಸರಾಸರಿಯಲ್ಲಿ 228 ರನ್‌ಗಳಿಸಿದ್ದಾರೆ. ಕೊಹ್ಲಿ ಅವರಿಗೆ ಹೋಲಿಸಿದರೆ ಅಜಿಂಕ್ಯಾ ರಹಾನೆ ಹಾಗೂ ಕರ್ನಾಟಕದ ಮಯಂಕ್ ಅಗರ್ವಾಲ್ ಅಧಿಕ ರನ್‌ಗಳಿಸಿದ್ದಾರೆ. ಅಜಿಂಕ್ಯಾ ರಹಾನೆ ಇಂಧೋರ್‌ನ ಸ್ಟೇಡಿಯಂನಲ್ಲಿ 297 ಟೆಸ್ಟ್ ರನ್‌ಗಳಿಸಿದರೆ, ಕನ್ನಡಿಗ ಮಯಂಕ್ 243 ರನ್‌ಗಳಿಸಿದ್ದಾರೆ.
ಆದರೆ ಇಂಧೋರ್‌ನಲ್ಲಿ ಟೆಸ್ಟ್ ಡಬಲ್ ಹಂಡ್ರೆಡ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆ ವಿರಾಟ್ ಕೊಹ್ಲಿ ಅವರಿಗಿದೆ. ಆದರೆ ಆಸೀಸ್ ವಿರುದ್ಧದ ಎರಡು ಟೆಸ್ಟ್‌ಗಳಲ್ಲಿ ನಿರೀಕ್ಷಿತ ಸಕ್ಸಸ್ ಕಾಣದ ಕೊಹ್ಲಿ 3ನೇ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದು, ಟೀಂ ಇಂಡಿಯಾ ಸಹ ಕಿಂಗ್ ಕೊಹ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ಬರುವ ನಿರೀಕ್ಷೆಯಲ್ಲಿದೆ.
Virat Kohli , Ajinkya rahane , indhore team india , match updates








