ಬೆಂಗಳೂರು : ರಾಜ್ಯದಲ್ಲಿ 8000 ಬೂತ್ ಮಟ್ಟದ ಟಾಸ್ಕ್ ಪೋರ್ಸ್ ಗಳನ್ನು ರಚನೆ ಮಾಡಲಾಗುವುದು. ಆ ಮೂಲಕ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲಾಗುವುದು. ಇದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ನಗರದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಅಧಿಕಾರಗಳ ಸಭೆ ನಡೆಸಿದ ಸಿಎಂ ಬಿ.ಎಸ್. ಯಡಿಯೂರಪ್ಪ ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದರು. ಸಭೆ ಬಳಿಕ ಮಾತನಾಡಿದ ಅವರು, ನಗರದಲ್ಲಿ 697 ಪ್ರಕರಣಗಳಿವೆ. ಅವುಗಳಲ್ಲಿ 330 ಸಕ್ರಿಯ ಪ್ರಕರಣಗಳಿವೆ. ಅದರಲ್ಲೂ 6 ಜನ ವಿಶೇಷ ನಿಗಾ ಘಟಕದಲ್ಲಿದ್ದಾರೆ.
ಇನ್ನೂ ಕ್ವಾರಂಟೈನ್ ವಿಚಾರದ ಬಗ್ಗೆ ಮಾತನಾಡಿದ ಅವರು ಮಹರಾಷ್ಟ್ರದಿಂದ ಬಂದವರನ್ನು ಏಳು ದಿನಗಳು ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ದೆಹಲಿ, ತಮಿಳುನಾಡು ನಿಂದ ರಾಜ್ಯಕ್ಕೆ ಬಂದವರಿಗೆ ಮೂರು ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತದೆ. ಜೊತೆಗೆ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರಿಗೆ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಾಗುತ್ತದೆ. ಜೊತೆಗೆ 200 ದಂಡವನ್ನು ಹಾಕಲಾಗುತ್ತದೆ.
ರಾಜ್ಯದಲ್ಲಿ 2956 ಸಕ್ರಿಯ ಪ್ರಕರಣಗಳಿವೆ, 93 % ರಷ್ಟು ಜನರಿಗೆ ರೋಗ ಲಕ್ಷಣಗಳಿಲ್ಲ. 200 ಜನರಿಗೆ ಮಾತ್ರ ರೋಗ ಲಕ್ಷಣಗಳಿವೆ. ಪರೀಕ್ಷಾ ಪ್ರಮಾಣವನ್ನು ಹೆಚ್ಚು ಮಾಡಲಾಗಿದೆ. ಐಸಿಎಂಆರ್ ಮಾರ್ಗಸೂಚನೆಗಳಂತೆ ಹೆಚ್ಚು ಪರೀಕ್ಷೆ ನಡೆಸಲಾಗಿದೆ. ಚಿಕಿತ್ಸೆಯ ವಿಧಾನಗಳನ್ನು ಮತ್ತು ಚಿಕಿತ್ಸೆ ದರದ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು








