2nd PUC : ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ; ಬಂದ್ ವಾಪಸ್ ಪಡೆದ ಕಾಂಗ್ರೆಸ್…
2023 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಾಳೆಯಿಂದ ರಾಜ್ಯಾದ್ಯಂತ ಆರಂಭವಾಗಲಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಳೆ ಕೊಟ್ಟಿದ್ದ ಬಂದ್ ಕರೆಯನ್ನ ವಾಪಸ್ ಪಡೆದಿದೆ. ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಕರ್ನಾಟಕ್ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಬಂದ್ ಗೆ ಕರೆಕೊಟ್ಟಿದ್ದರು.
ಬೆಳಗ್ಗೆ 9 ರಿಂದ 11ಗಂಟೆವರೆಗೆ ಬಂದ್ ಮಾಡಿದ್ರೆ ಎಕ್ಸಾಂಗೆ ತೊಂದರೆಯಾಗುತ್ತದೆ. ಹೀಗಾಗಿ ಬಂದ್ ವಾಪಸ್ ಪಡೆಯುವಂತೆ ಖಾಸಗಿ ಕಾಲೇಜು ಮಾಲಿಕರು ಮನವಿ ಮಾಡಿದ್ದರು. ಈ ಹಿನ್ನೆಲೆ ಕಾಂಗ್ರೆಸ್ ನಾಳಿನ ಬಂದ್ ವಾಪಸ್ ಪಡೆದಿದೆ.
ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆಗಾಗಿ 1109 ಪರೀಕ್ಷಾ ಕ್ಷೆಂದ್ರಗಳಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ. 7,26,224 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಲಿದ್ದರೆ. ಇದರಲ್ಲಿ ಹೊಸದಾಗಿ 6,29,791 ಲಕ್ಷ ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದು, 3,25,053 ವಿದ್ಯಾರ್ಥಿನಿಯರು, 3,47,038 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಅಲ್ಲದೆ, 25,847 ಖಾಸಗಿ ಮತ್ತು 70,586 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ.
ನಾಳೆಯಿಂದ ಅಂದರೆ ಮಾರ್ಚ್ 9 ರಿಂದ ಮಾರ್ಚ್ 29 ರ ವರೆಗೂ ವಿವಿಧ ವಿಷಯಗಳ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಜತೆಗೆ ಪೊಲೀಸ್ ಬಂದೋಬಸ್ತ್ಗೂ ಕ್ರಮ ಕೈಗೊಳ್ಳಲಾಗಿದೆ. ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
2nd PUC : 2nd PUC exam from tomorrow ; Congress withdraws bandh…