Uttar Pradesh : ಭಗವಾನ್ ಶ್ರೀಕೃಷ್ಣನನ್ನೇ ಮದುವೆಯಾದ ಯುವತಿ……
ಯುವತಿಯೊಬ್ಬಳು ಶಾಸ್ತ್ರ ಬದ್ಧವಾಗಿ ಭಗವಾನ್ ಶ್ರೀ ಕೃಷ್ಟನನ್ನೇ ಮದುವೆಯಾಗಿ, ಶ್ರೀ ಕೃಷ್ಣನೊಂದಿಗೆ ಸಪ್ತಪದಿ ತುಳಿದಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ. ಎಲ್ಲಾ ಸಂಬಂಧಿಕರನ್ನೂ ಮದುವೆಗೆ ಆಹ್ವಾನಿಸಿ ಪುರೋಹಿತರ ವೇದ ಮಂತ್ರಗಳ ನಡುವೆ ಅದ್ದೂರಿಯಾಗಿ ಮದುವೆ ಮಾಡಲಾಗಿದೆ. ಮದುವೆಯ ನಂತರ ವಧು ಬೀಳ್ಕೊಡುವ ರೀತಿಯೇ ಯುವತಿಯನ್ನ ಬೀಳ್ಕೊಡಲಾಗಿದೆ.
ಔರೈಯಾ ಜಿಲ್ಲೆಯ ಬಿಡುವ ಪಟ್ಟಣದ ರಕ್ಷಾ ಸೋಲಂಕಿ ಎಂಬ ಯುವತಿ ಶ್ರೀ ಕೃಷ್ಣನ ಪರಮ ಭಕ್ತೆಯಾಗಿದ್ದಾಳೆ. ಕಳೆದ ವರ್ಷ ಜುಲೈನಲ್ಲಿ ರಕ್ಷಾ ಸೋಲಂಕಿ ತನ್ನ ಕುಟುಂಬದೊಂದಿಗೆ ವೃಂದಾವನಕ್ಕೆ ಹೋಗಿದ್ದಾಗಿನಿಂದ ಯುವತಿಯ ಮನದಲ್ಲಿ ಶ್ರೀಕೃಷ್ಣನ ಮೇಲಿನ ಪ್ರೀತಿ ಮೂಡಿದೆ. ಯುವತಿ ಕನಸಿನಲ್ಲಿ ಶ್ರೀ ಕೃಷ್ಣನನ್ನ ವಿವಾಹವಾಗಿರುವುದಾಗಿ ಹೇಳಿ ತನ್ನನ್ನ ಸಂಪೂರ್ಣವಾಗಿ ಶ್ರೀ ಕೃಷ್ಣನಿಗೆ ಅರ್ಪಿಸಿಕೊಂಡಿದ್ದಾಳೆ.
ಬಾಲಕಿ ತನ್ನ ತಂದೆಗೆ ಕೃಷ್ಣನನ್ನ ಮದುವೆಯಾಗುವುದಾಗಿ ತಿಳಿಸಿದ್ದಳು. ತಂದೆ ಒಪ್ಪಿ ಮದುವೆಗೆ ವ್ಯವಸ್ಥೆ ಮಾಡಿದ್ದಾರೆ. ಎಲ್ಲ ಬಂಧುಗಳನ್ನು ಆಹ್ವಾನಿಸಿ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಯಿತು. ಶ್ರೀಕೃಷ್ಣನ ಮೂರ್ತಿಯನ್ನ ಮಂಟಪಕ್ಕೆ ತಂದು ಮದುವೆ ಮಾಡಲಾಯಿತು. ಮದುವೆಯನ್ನು ಸಾಂಪ್ರದಾಯಿಕ ರೀತಿಯಲ್ಲಿ ನಡೆಸಲಾಯಿತು. ಈ ಹಿಂದೆಯೂ ಇದೇ ರೀತಿಯ ಘಟನೆಗಳು ವರದಿಯಾಗಿವೆ.
Uttar Pradesh: The young woman who married Lord Krishna…








