Weekend with Ramesh : “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ ರಮ್ಯಾ…
ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 5 ಅದ್ದೂರಿಯಾಗಿ ಶುರುವಾಗಿದೆ. ಮೊದಲ ಅತಿಥಿಯಾಗಿ ಮೋಹಕ ತಾರೆ, ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರನ್ನ ಕರೆತರಲಾಗಿದ್ದು ನಟ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡುತ್ತಿದ್ದಾರೆ.
ಶನಿವಾರ ನಡೆದ ಮೊದಲ ಎಪಿಸೋಡ್ ನಲ್ಲಿ ರಮ್ಯಾ ತಮ್ಮ ಬಾಲ್ಯ, ಶಿಕ್ಷಣ, ಸಿನಿಮಾಗಳ ಕುರಿತು ಮೆಲುಕು ಹಾಕಿದ್ದಾರೆ. ಆದರೇ ಎಲ್ಲದಕ್ಕಿಂತ ಹೆಚ್ಚಾಗಿ ಸದ್ದು ಮಾಡಿದ್ದು ನಟಿ ರಮ್ಯಾ ಬಳಿಸಿದ ಇಂಗ್ಲೀಷ್ ಭಾಷೆ. ರಮ್ಯಾ ಮಾತನಾಡುವಾ ಅತಿಹೆಚ್ಚು ಇಂಗ್ಲೀಷ್ ಮಿಶ್ರಿತ ಕನ್ನಡದಲ್ಲಿ ಮಾತನಾಡಿದ್ದು ಟ್ರೋಲ್ ಗೆ ಕಾರಣವಾಗುತ್ತಿದೆ.
ರಮ್ಯಾ ಇಂಗ್ಲೀಷ್ ನಲ್ಲಿ ಮಾತನಾಡಿರುವ ಕುರಿತು ಸಾಕಷ್ಟು ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅದರಲ್ಲಿ ಒಂದು “ನನ್ನಜ್ಜಿಗೆ ರಮ್ಯಾ ಅವರ ಪರಿಚಯ ಇದೆ. ಆದರೆ ಅವರಿಗೆ ಇಂಗ್ಲಿಷ್ ಗೊತ್ತಿಲ್ಲ. ಹಾಗಾಗಿ ಅವರು ಟಿವಿ ಆಫ್ ಮಾಡಿ ಹೋಗಿ ಮಲಗಿದ್ರು ಎಂದಿದ್ದಾರೆ ನೆಟ್ಟಿಗರು.
ಇದಕ್ಕೆ ಕಾರಣ ಡಾ ಬ್ರೋ ಅವರನ್ನ ವೀಕೆಂಡ್ ವಿತ್ ರಮೇಶ್ ಗೆ ಕರೆಸಬೇಕು ಎಂದಿದ್ದಕ್ಕೆ ಜೀ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ನಿಮ್ಮ ಅಜ್ಜಿಗೆ ಡಾ. ಬ್ರೋ ಗೊತ್ತಿದ್ದಾರ ಎಂದು ಕೇಳಿದ್ದರು. ಇದೀಗ ಇದೇ ವಿಚಾರಕ್ಕೆ ಹಲವು ಮೀಮ್ ಗಳು ಹರಿದಾಡುತ್ತಿವೆ. ಈ ಸೀಸನ್ನಲ್ಲಿ ವೀಕೆಂಡ್ ವಿತ್ ರಮೇಶ್ ಯಾಕೆ ಇಂಗ್ಲಿಷ್ ವರ್ಷನ್ ಮಾಡಿದ್ದಾರೆ ? ಕನ್ನಡ ಸಬ್ಟೈಟಲ್ ಆದ್ರೂ ಹಾಕ್ರೋ ಎಂದಿದ್ದಾರೆ. ಇನ್ನೊಬ್ಬರು ಇದು ವೀಕೆಂಡ್ ವಿತ್ ರಮೇಶ್ ಹಾ? ಅಥವಾ ವೀಕೆಂಡ್ ವಿತ್ ಇಂಗ್ಲಿಷ್ ಹಾ? ಎಂದು ಕೇಳಿದ್ದಾರೆ.
Weekend with Ramesh: Ramya got trolled for using English…