IPL 2023 : IPL ಆರಂಭಕ್ಕೂ ಮುನ್ನವೇ RCB ಗೆ ಹಿನ್ನಡೆ ; ಕಾಡುತ್ತಿರುವ ಗಾಯದ ಸಮಸ್ಯೆ…
IPL 2023 ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹಿನ್ನಡೆ ಉಂಟಾಗಿದೆ. ತಂಡಕ್ಕೆ ಗಾಯದ ಸಮಸ್ಯೆ ಕಾಡುತ್ತಿದೆ. RCB ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಅವರು ಅಹಮದಾಬಾದ್‌ನಲ್ಲಿ ಶುಕ್ರವಾರ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಇದೆ.
ಹ್ಯಾಜಲ್‌ವುಡ್ ಕಾಲಿನ ಗಾಯದಿಂದಾಗಿ ಭಾರತದ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಹೊರಗುಳಿದಿದ್ದರು. ಇದೀಗ IPL ನಲ್ಲಿ ಭಾಗವಹಿಸುವ ಮುನ್ನ ಕ್ರಿಕೆಟ್ ಆಸ್ಟ್ರೇಲಿಯಾದ ವೈದ್ಯಕೀಯ ಸಿಬ್ಬಂದಿಯೊಂದಿಗೆ ಸಮಾಲೋಚಿಸಿ ನಂತರ ನಿರ್ಧಾರವನ್ನ ತೆಗೆದುಕೊಳ್ಳಲಿದ್ದಾರೆ.
ಮತ್ತೊಂದು ಮಹತ್ವದ ಬೆಳವಣಿಗೆ ಏನೆಂದರೆ, ಈ ತಿಂಗಳ ಆರಂಭದಲ್ಲಿ ಭಾರತದ ವಿರುದ್ಧ ಅಂತಿಮ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಗೆ ಅಲಭ್ಯರಾಗಿದ್ದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕಾಲಿನ ಗಾಯದಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಮೊದಲ ಪಂದ್ಯ ಆಡುವುದು ಅನುಮಾನವಾಗಿದೆ.
ಆರ್‌ಸಿಬಿಯ ಮೊದಲ ಎರಡು ಪಂದ್ಯಗಳಿಗೆ ವನಿಂದು ಹಸರಂಗಾ ಕೂಡ ಅಲಭ್ಯರಾಗಲಿದ್ದಾರೆ. ಶ್ರೀಲಂಕಾದ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾಗವಹಿಸುತ್ತಿರುವ ಕಾರಣ ಏಪ್ರಿಲ್ 8 ರ ನಂತರ ಆರ್ ಸಿ ಬಿಯನ್ನ ಕೂಡಿಕೊಳ್ಳಲಿದ್ದಾರೆ. ಮೈಕೆಲ್ ಬ್ರೇಸ್‌ವೆಲ್ ಇಂಗ್ಲೆಂಡ್ ಅಂತರಾಷ್ಟ್ರೀಯ ಪಂದ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಆರ್ ಸಿ ಬಿ ಮೊದಲ ಪಂದ್ಯಗಳಿಗೆ ಕೆಲವು ಅಂತರಾಷ್ಟ್ರೀಯ ಆಟಗಾರರು ಅಲಭ್ಯರಾಗಲಿದ್ದಾರೆ.
2019 ರ ನಂತರ ಮೊದಲ ಬಾರಿಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತವರು ನೆಲದಲ್ಲಿ ಮುಂಬೈ ವಿರುದ್ದ ಚಿನ್ನಸ್ವಾಮಿಯಲ್ಲಿ ಕಣಕ್ಕಿಳಿಲಿದೆ. ಕರೋನಾ ಕಾರಣದಿಂದಾಗಿ ಮೂರು ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಿರಲಿಲ್ಲ.
IPL 2023:RCB’s setback before the start of IPL; A nagging injury problem…