Karnataka Election 2023 : ಮಂಡ್ಯದಲ್ಲಿ ಶುರುವಾಯ್ತು ಹಾಲಿ – ಮಾಜಿ ಶಾಸಕರ ಬೀದಿ ಕಾಳಗ….
ಕರ್ನಾಟಕ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಮಂಡ್ಯದಲ್ಲಿ ರಾಜಕೀಯ ಚಟುವಟಿಕೆಗಳು ರಂಗೇರಿದೆ. ಇದೀಗ ಚುನಾವಣಾ ಅಖಾಡದಲ್ಲಿ ಹಾಲಿ-ಮಾಜಿ ಶಾಸಕರ ವಾಕ್ಸಮರ ಶುರುವಾಗಿದೆ. ಮಳವಳ್ಳಿ ಶಾಸಕ ಅನ್ನದಾನಿ ಹಾಗೂ ಮಾಜಿ ಶಾಸಕ ನರೇಂದ್ರಸ್ವಾಮಿ ನಡುವೆ ಮಾತಿನ ಪೈಟ್ ನಡೆಯುತ್ತಿದೆ.
ಜೆಡಿಎಸ್ ನ ಪುಟ್ಗೋಸಿ ಪಕ್ಷ ಎಂದ ಮಾತು ಹಿಡ್ಕೊಂಡು ಪ್ರತಿಭಟನೆ ಮಾಡುಸ್ತಾನೆ. ಹಾಡು ಹೇಳುವ ಗಿರಾಕಿ ಶಿಷ್ಯ ತನ್ನ ಚೇಲಾಗಳ ಮೂಲಕ ಪ್ರೊಟೆಸ್ಟ್ ಮಾಡುಸ್ತಾನೆ. ಈ ಗೊಡ್ಡು ಬೆದರಿಕೆಗೆ ಹೆದರಿ ಬದುಕವಂತ ಮಗ ನಾನಲ್ಲ.ಎಲ್ಲಿಗೆ ಬರ್ಬೇಕು ಹೇಳು ಒಬ್ನೆ ಬರ್ತೀನಿ. ಬದುಕಿರುವ ತನಕ ಗುಂಡಿ ಇಟ್ಕೊಂಡು ಬದುಕುತ್ತೇನೆ ಎಂದು ಜೆಡಿಎಸ್ ಶಾಸಕ ಅನ್ನಾದಾನಿ ವಿರುದ್ಧ ಮಾಜಿ ಸಚಿವ ನರೇಂದ್ರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಸಚಿವ ನರೇಂದ್ರಸ್ವಾಮಿ ಮಾತಿಗೆ ಹಾಲಿ ಶಾಸಕ ಕೌಂಟರ್ ಕೌಂಟರ್ ಕೊಟ್ಟಿದ್ದು, ಆಚಾರ ವಿಲ್ಲದೆ ನಾಲಿಗೆ, ನಿನ್ನದು ನೀಚ ಬುದ್ದಿ ನುಡಿಯುವ ನಾಲಿಗೆ. ಏಯ್ ಎಲ್ಲಿಗ್ ಬರ್ಬೇಕು ಹೇಳು, ಒಬ್ನೆ ಬರ್ತೀನಿ ಅಂತೀರಾ. ಡಾ.ಮಲ್ಲಣ್ಣ ಒಬ್ನೆ ಗಂಡ್ಸು ಅಂತಾ ಹುಟ್ಟಿಸಿರೋನು. ನಮಗೆಲ್ಲ ಸೀರೆ ಹುಟ್ಟಿಸಿ ಇಲ್ಲೆ ಬಿಟ್ಟಿದ್ದಾರೆ. ನಮ್ಮಪ್ಪ ಕೆಂಚಯ್ಯ ಪ್ರಾಕ್, ಲಂಗ ಹಾಕಿ ಬಿಟ್ಬಿಟಿದ್ದಾರೆ. ಅವರಪ್ಪ ಮಲ್ಲಣ ಮಾತ್ರ ಪ್ಯಾಂಟ್ ಶರ್ಟ್ ಹಾಕಿ ನರೇಂದ್ರಸ್ವಾಮಿಯನ್ನ ಭೂಮಿಗೆ ಬಿಟ್ಬಿಟ್ಟವ್ರೇ. ಮಿಸ್ಟರ್ ನನ್ನ ಬಗ್ಗೆ ಮಾತನಾಡುವಾಗ ಹುಷಾರ್. ಎಚ್ಚರಿಕೆಯಿಂದ ಮಾತನಾಡುವಂತೆ ಅನ್ನದಾನಿ ಅವಾಜ್ ಹಾಕಿದ್ದಾರೆ.
Karnataka Election 2023 : The street fight of former MLAs started in Mandya.








