Amravati – ಶಿಕ್ಷಕ ನೊಬ್ಬನು ಅಪ್ರಾಪ್ತ ಬಾಲಕಿಯನ್ನು ಮದುವೆ ಯಾಗುವುದಾಗಿ ನಂಬಿಸಿ ವಂಚಿಸಿದ ಆರೋಪದ ಮೇಲೆ ಪೋಲಿಸರು ಶಿಕ್ಷಕನನ್ನು ಬಂಧಿಸಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಂಗವರಂ ಮಂಡಲ್ ನಲ್ಲಿ ಬೆಳಕಿಗೆ ಬಂದಿದೆ .
33 ವರ್ಷದ ಶಿಕ್ಷಕನನ್ನು ಆರೋಪಿಯನ್ನು ಚಲಪತಿ ಎಂದು ಗುರುತಿಸಲಾಗಿದೆ . ಈತ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ಚಲಪತಿ ಈಗಾಗಲೇ ಮದುವೆಯಾಗಿ ಅವನಿಗೆ ಒಬ್ಬ ಮಗಳಿದ್ದಾಳೆ. ಆದರೂ ಆತ 12ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಯನ್ನು ಪ್ರೀತಿಸಿದ್ದಾನೆ.
ನಂತರ ಬಾಲಕಿಯ ಅಂತಿಮ ಪರೀಕ್ಷೆ ಮುಗಿದ ನಂತರ ಚಲಪತಿ ಸುಳ್ಳು ಹೇಳಿ ತಿರುಪತಿಗೆ ಕರೆದುಕೊಂಡು ಹೋಗಿದ್ದ ಈ ಸಂದರ್ಭದಲ್ಲಿ ಬಾಲಕಿಯ ಬಳಿ ತಾನು ಪ್ರಾಮಾಣಿಕ, ನನ್ನ ನಂಬು, ನಿನ್ನನ್ನು ನಾನು ಚನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಬಣ್ಣದ ಮಾತುಗಳನ್ನು ಆಡಿ ನಂಬಿಸಿ ಅಲ್ಲಿನ ದೇವಸ್ಥಾನದಲ್ಲಿ ಮದುವೆಯಾಗಿದ್ದ.
ಮದುವೆಯಾದ ಬಳಿಕ ಚಲಪತಿ ವರ್ತನೆಯಲ್ಲಿ ಬದಾಲಾವಣೆನ್ನು ಗಮನಿಸಿದ ಯುವತಿ ಪಾಲಕರಿಗೆ ವಿಷಯ ತಿಳಿಸಿದ್ದಾಳೆ.
ವಿಷಯ ತಿಳಿದ ಪೋಷಕರು ಹಾಗೂ ಯುವತಿ ಗಂಗವರಂ ಪೊಲೀಸ್ ಠಾಣೆಗೆ ಹೋಗಿ ದೂರು ಧಾಖಲಿಸಿದ್ದಾಳೆ .
ದೂರು ಧಾಕಲಿಸಿ ಕೊಂಡ ಆರೋಪಿಯನ್ನು ಬಂಧಿಸಿ ಪೊಲೀಸರು ಚಲಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ ವಿಚಾರಣೆ ನಡೆಸುತ್ತಿದ್ದಾರೆ.








