ಬೆಂಗಳೂರು : ಮಲ್ಲೇಶ್ವರಂನಲ್ಲಿರುವ ಪಕ್ಷದ ಮುಖ್ಯ ಕಚೇರಿಯಲ್ಲಿ ಸೋಮವಾರ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸುದ್ದಿಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿಯೇ ನೀತಿ ಸಂಹಿತೆ ವಿಚಾರವಾಗಿ ರಾಜ್ಯ ಚುನಾವಣಾಧಿಕಾರಿಗಳು (Election Officers) ನೀತಿ ಸಂಹಿತೆ ವಿಚಾರವಾಗಿ ಬಿಜೆಪಿ(BJP)ಗೆ ಶಾಕ್ ನೀಡಿದ್ದಾರೆ.
15 ಅಧಿಕಾರಿಗಳ ತಂಡ ಕೇಸರಿ ಬಾವುಟಗಳನ್ನು ಕಿತ್ತು ಹಾಕಿದ್ದಾರೆ. ಚುನಾವಣೆ (Election) ಸಂದರ್ಭದಲ್ಲಿ ಕೇಸರಿ ತೋರಣ ಕಟ್ಟಿ ಸಂಭ್ರಮಕ್ಕೆ ಮುಂದಾಗಿದ್ದ ಬಿಜೆಪಿ ಮುಖಂಡರಿಗೆ ಅಧಿಕಾರಿಗಳ ದಾಳಿ ಮುಜುಗರ ತಂದಿದೆ. ಮಲ್ಲೇಶ್ವರಂನಲ್ಲಿ (Malleshwaram) ಉದ್ಘಾಟನೆಗೊಂಡಿದ್ದ ಬಿಜೆಪಿಯ ಮಾಧ್ಯಮ ಕೇಂದ್ರದಲ್ಲಿ ಸಚಿವರೊಂದಿಗೆ ಸಿಎಂ ಸುದ್ದಿಗೋಷ್ಠಿ ನಡೆಸಿದ್ದರು. ಆಗ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೊಪ್ಪಳದ ಕಾರಟಗಿಯಲ್ಲಿ (Karatagi) ಬಿಜೆಪಿಯಿಂದ ಆಯೋಜಿಸಿದ್ದ ಬಾಡೂಟವನ್ನು ಅಧಿಕಾರಿಗಳು ತಡೆದಿದ್ದಾರೆ. ಬಿಜೆಪಿಯ ಕೃಷ್ಣಯ್ಯ ಶೆಟ್ಟಿಯವರ ಮನೆಯಲ್ಲಿ ಸಂಗ್ರಹಿಸಿದ್ದ ಆಹಾರದ ಕಿಟ್ಗಳನ್ನು ವಶಕ್ಕೆ ಪಡೆದಿದ್ದಾರೆ. ಭಾನುವಾರ ಅವಧಿ ಮೀರಿ ಸಭೆ ನಡೆಸಿದ್ದ ರೇಣುಕಾಚಾರ್ಯ (Renukacharya) ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.








