ಬೆಂಗಳೂರು : ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ಹೀಗಾಗಿ ನೀತಿ ಸಂಹಿತೆ ಜಾರಿಯಾಗಿದ್ದು, ಆದಾಯ ತೆರಿಗೆ ಇಲಾಖೆ , ಪೋಲಿಸ್ ಇಲಾಖೆ, ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಸೇರಿದಂತೆ ಎಲ್ಲೆಡೆ ತಂಡಗಳು ಹದ್ದಿನ ಕಣ್ಣು ನೆಟ್ಟಿವೆ.
ನೀತಿ ಸಂಹಿತೆ ಜಾರಿಯಾದ ದಿನದಿಂದ ಇಲ್ಲಿಯವರೆಗೆ ಅಂದರೆ 12 ದಿನಗಳಲ್ಲಿ ಎಲ್ಲ ತಂಡಗಳಿಂದ ಒಟ್ಟು 47,43,85,902 ಮೌಲ್ಯದ ನಗದು ಸೇರಿದಂತೆ ಮಧ್ಯ, ಮಾದಕ ದ್ರವ್ಯ ಇತ್ಯಾದಿ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ.
• ರಾಜ್ಯದಲ್ಲಿ ಒಟ್ಟು 12,82,94,736 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
• 16,02,76,775 ರೂ. ಮೌಲ್ಯದ 2,78,798 ಲೀಟರ್ ಮಧ್ಯ ವಶಪಡಿಸಿಕೊಳ್ಳಲಾಗಿದೆ.
• 41,26,155 ಮೌಲ್ಯದ 79.44 ಕೆ.ಜಿ ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ.
• 6,72,96,733 ಮೌಲ್ಯದ 13.575 ಕೆ.ಜಿ ಬಂಗಾರ ವಶಕ್ಕೆ ಪಡೆಯಲಾಗಿದೆ.
• 63,98,560 ಮೌಲ್ಯದ 88.763 ಕೆ.ಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.
• 10,79,92,943 ಮೌಲ್ಯದ ಉಚಿತ ಕೊಡುಗೆ, ಉಡುಗೊರೆಗಳನ್ನ ವಶಕ್ಕೆ ಪಡೆಯಲಾಗಿದೆ.
• ನಗದು, ಮಧ್ಯ, ಮಾದಕ ದ್ರವ್ಯ, ಉಡುಗೊರೆ, ಅಮೂಲ್ಯ ಲೋಹಗಳನ್ನ ವಶಪಡಿಸಿಕೊಂಡಿರುವ ಬಗ್ಗೆ ಪೊಲೀಸ್ ಇಲಾಖೆ ಒಟ್ಟು 316 FIR ದಾಖಲಿಸಿದೆ.








