ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ಯೋಜನೆಗೆ ಬದಲಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಕೇಂದ್ರ ಸರಕಾರಿ ನೌಕರರಾಗಿ 2004ಕ್ಕೂ ಮೊದಲು ನೇಮಕಗೊಂಡಿರುವವರು, ತಮ್ಮ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು 1972ರಲ್ಲಿ ಜಾರಿಗೊಂಡಿರುವ ಕೇಂದ್ರ ನಾಗರಿಕ ಸೇವೆಗಳ ಪಿಂಚಣಿ ಯೋಜನೆಗೆ ವರ್ಗಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತಂತೆ ಈಗಾಗಲೇ ಕೇಂದ್ರದ ಪಿಂಚಣಿ ಮತ್ತು ಪಿಂಚಣಿದಾರರ ಕ್ಷೇಮಾಭಿವೃದ್ಧಿ ಇಲಾಖೆಯು ಕಚೇರಿ ಸುತ್ತೋಲೆಯನ್ನು ಹೊರಡಿಸಿದೆ.
ಈಗಿರುವ ಪಿಂಚಣಿ ಯೋಜನೆಯನ್ನು ಹಳೆಯ ಮಾದರಿಯ ಪಿಂಚಣಿ ವ್ಯವಸ್ಥೆಗೆ ಬದಲಾಯಿಸಲು ಬಯಸುವ ಆಸಕ್ತ ನೌಕರರು ಇದೇ 2020ರ ಮೇ 31ರೊಳಗಾಗಿ ಬದಲಾಯಿಸಿಕೊಳ್ಳಬೇಕೆಂದು ಮತ್ತು ಇದು ಒಂದೇ ಬಾರಿ ನೀಡುವ ಸೌಲಭ್ಯವಾಗಿದೆಯೆಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
10 ಕೋ. ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ – ಕಾಮಗಾರಿ ಶಿಲಾನ್ಯಾಸ ನೆರವೇರಿಸಿದ ಸಾರಿಗೆ ಸಚಿವ ಬೈರತಿ ಸುರೇಶ್
ಬೆಂಗಳೂರು: ಹೆಬ್ಬಾಳ ವಿಧಾನಕ್ಷೇತ್ರ ವ್ಯಾಪ್ತಿಯಲ್ಲಿ ಮತ್ತೊಂದು ಸುಸಜ್ಜಿತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣವಾಗಲಿದೆ. ಕ್ಷೇತ್ರದ ಶಾಸಕರೂ ಆಗಿರುವ ಸಾರಿಗೆ ಸಚಿವ ಬೈರತಿ ಸುರೇಶ್...








