ಬಿಜೆಪಿ ಟಿಕೆಟ್ ಮಿಸ್ ಆದ ಹಿನ್ನೆಲೆಯಲ್ಲಿ ಶಾಸಕ ಎಂ.ಪಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
ಸಿ.ಟಿ ರವಿ (CT Ravi) ಬಿಜೆಪಿಯನ್ನು (BJP) ಮುಳುಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮೂಡಿಗೆರೆ (Mudigere) ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ (MP Kumaraswamy) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಕೈ ತಪ್ಪಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ನನಗೆ ಟಿಕೆಟ್ ಕೈತಪ್ಪುವಂತೆ ಮಾಡಿರುವ ಹಿಂದೆ ಸಿ.ಟಿ. ರವಿ ಕೈವಾಡ ಇದೆ. ಬಿಜೆಪಿ ಸಿಟಿ ರವಿಯನ್ನು ನಂಬಿಕೊಂಡು ಹೊದರೆ, ಮುಂದಿನ ದಿನಗಳಲ್ಲಿ ಅನುಭವಿಸುತ್ತದೆ. ಸಿಟಿ ರವಿ ಓದ್ಕೊಂಡು ಬಂದಿಲ್ಲ. ಸಂಘ ಪರಿವಾರದ ಜೊತೆ ಇದ್ದು ಮಾತನಾಡುವುದನ್ನು ಕಲಿತುಕೊಂಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಹೈಕಮಾಂಡ್‍ಗೆ ನನ್ನ ಬಗ್ಗೆ ತಪ್ಪು ವರದಿ ನೀಡಲಾಗಿದೆ. ವೈಯಕ್ತಿಕ ಕಾರಣಕ್ಕೆ ರಾಜಕಾರಣ ಮಾಡುತ್ತಿದ್ದಾರೆ. ಕೆಲ ರಾಜ್ಯ ನಾಯಕರೇ ಇದಕ್ಕೆ ಕಾರಣ. ಸಿಟಿ ರವಿ ಕೈವಾಡ ಇದೆ ಅನ್ನೋದು ಸ್ಪಷ್ಟವಾಗಿ ತಿಳಿದಿದೆ. ಹೈಕಮಾಂಡ್ ಮುಂದೆ ನನ್ನ ಬಗ್ಗೆ ಇಲ್ಲ ಸಲ್ಲದನ್ನ ಹೇಳಿ ಟಿಕೆಟ್ ತಪ್ಪಿಸಿದ್ದಾರೆ. ಬಿಜೆಪಿ ಮುಗಿಸುವವರೆಗೂ ಸಿಟಿ ರವಿ ವಿಶ್ರಾಂತಿ ಪಡೆಯುವುದಿಲ್ಲ. ಪಕ್ಷಕ್ಕೆ ಇದು ಮುಂದೇ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪ ಸ್ವೀಚ್ ಆಫ್ ಮಾಡಿದರೆ, ಬಿಜೆಪಿಗೆ 50 ಸೀಟ್ ಬರುವುದಿಲ್ಲ. ಬಿ.ಎಸ್ ಯಡಿಯೂರಪ್ಪ ಅವರು ಈಗಲೇ ಸ್ವಿಚ್ಛ್ ಆಫ್ ಮಾಡಿಕೊಳ್ಳಲಿ ಎಂದು ಮನವಿ ಮಾಡುತ್ತೇನೆ. ಟಿಕೆಟ್ ಕೈ ತಪ್ಪಿದ ಬಳಿಕ ಯಾವ ಒಬ್ಬ ನಾಯಕರು ಕರೆ ಮಾಡಿ ಮಾತನಾಡಿಲ್ಲ. ನಾನೇ ಸಿಎಂ ಭೇಟಿ ಮಾಡಿದ್ದೆ, ಸಿಎಂ ಅವರ ಮಾತನಾಡಿದ ದಾಟಿ ನನಗೆ ಟಿಕೆಟ್ ಇಲ್ಲ ಎನ್ನುವುದು ಖಚಿತವಾಗಿತ್ತು ಎಂದು ಕಿಡಿಕಾರಿದ ಅವರು, ಶಾಸಕ ಭವನದಿಂದ ಹೊರಡುವಾಗ ಶಾಸಕನಾಗಿಯೇ ಮರಳಿ ಬರುವುದಾಗಿ ಶಪಥ್ ಮಾಡಿದ್ದಾರೆ.








