ಬಳ್ಳಾರಿ : ರಾಜ್ಯ ವಿಧಾನಸಭಾ ಚುನಾವಣೆ Karnataka Assembly Election)ಗೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಿಂದ ಮಂಗಳಮುಖಿಯೊಬ್ಬರು ದೇಶಪ್ರೇಮ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳಮುಖಿಯಾಗಿರುವ ಟಿ.ರಾಮಕ್ಕ(T Ramakka) ನಾಮಪತ್ರ ಸಲ್ಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ. ಕಂಪ್ಲಿ ತಾಲೂಕಿನ ಬಾದನಹಟ್ಟಿ ಗ್ರಾಮದವವರಾದ ಟಿ ರಾಮಕ್ಕ ವಿದ್ಯಾಭ್ಯಾಸ ಮಾಡದಿದ್ದರೂ ಶಾಸಕರಾಗುವ (MLA) ಆಗುವ ಕನಸು ಕಟ್ಟಿಕೊಂಡು ವಿಧಾನಸಭೆ ಚುನಾವಣೆಗೆ ಇದೀಗ ಸ್ಪರ್ಧೆ ಮಾಡಿದ್ದಾರೆ.
ದೇಶಪ್ರೇಮ ಪಕ್ಷದ ಪದಾಧಿಕಾರಿಗಳು ಹಾಗೂ ಮಂಗಳಮುಖಿಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆಗೆ ಅಪಿಡವಿಟ್ ಸಲ್ಲಿಸಿದ್ದಾರೆ. ಕೇವಲ ಪಾನ್ ಸಂಖ್ಯೆ ಹೊಂದಿರುವ ಮಂಗಳಮುಖಿ ರಾಮಕ್ಕರ ಕೈಯಲ್ಲಿ ನಗದು 30 ಸಾವಿರ ರೂ. ಹಣ, 5 ಲಕ್ಷ ರೂ. ಮೌಲ್ಯದ 10 ತೊಲೆ ಬಂಗಾರ. 1.40 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ಹೊಂದಿದ್ದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆ ಹೊಂದಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ.
ಸಮಾಜ ಮಂಗಳಮುಖಿಯರಿಗೆ ಗೌರವ ನೀಡುತ್ತಿಲ್ಲ. ಇದರಿಂದಾಗಿ ಭಿಕ್ಷೆಬೇಡಿಕೊಂಡು ಜೀವನ ಸಾಗಿಸುವ ದುಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ಮನನೊಂದು ಶಾಸಕಿಯಾಗುವ ಕನಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ. ನಾನು ಶಾಸಕಿಯಾದಲ್ಲಿ ಕ್ಷೇತ್ರದಲ್ಲಿನ ಸರ್ವರಿಗೂ ಸಮಾನತೆಯನ್ನು ನೀಡುತ್ತೇನೆ ಎಂದು ಹೇಳಿದ್ದಾರೆ.