ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ (Karnataka Election) ಇಂದು ಮತದಾನ ನಡೆಯಲಿದೆ. ಬೆಳಗ್ಗೆ ಏಳು ಗಂಟೆಗೆ ರಾಜ್ಯದ 224 ಮತ ಕ್ಷೇತ್ರಗಳಲ್ಲಿ ಮತದಾನ ಆರಂಭವಾಗಿದೆ.
ಸಂಜೆ ಆರು ಗಂಟೆಯವರೆಗೂ ನಿರಂತರವಾಗಿ ಮತದಾನ (Vote) ಮಾಡಲು ಅವಕಾಶ ನೀಡಲಾಗಿದೆ. ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ದತೆಗಳನ್ನು ನಡೆಸಿದೆ. ಹಿಂದೆಂದೂ ಕಾಣದಷ್ಟು ಭದ್ರತೆನ್ನು ಈ ಬಾರಿ ಕೈಗೊಳ್ಳಲಾಗಿದೆ.
ಎಲ್ಲ ತಾಲೂಕು ಕೇಂದ್ರಗಳಲ್ಲಿ ಮಸ್ಟರಿಂಗ್ ಪ್ರಕ್ರಿಯೆ ಸುಗಮವಾಗಿ ನಡೆದಿದೆ. ಪ್ರಧಾನಿ ಮೋದಿ (PM Modi) ಸೇರಿದಂತೆ ಘಟನಾಘಟಿ ನಾಯಕರುಗಳು, ಸೆಲೆಬ್ರಿಟಿಗಳು ಹಕ್ಕು ಚಲಾಯಿಸುವಂತೆ ಮನವಿ ಮಾಡಿದ್ದಾರೆ.
* ಒಟ್ಟು ಮತ ಕ್ಷೇತ್ರ – 224
* ಒಟ್ಟು ಅಭ್ಯರ್ಥಿಗಳು – 2631
* ಬಿಜೆಪಿ ಅಭ್ಯರ್ಥಿಗಳು – 224, ಕಾಂಗ್ರೆಸ್ ಅಭ್ಯರ್ಥಿಗಳು – 223 (ಮೇಲುಕೋಟೆಯಲ್ಲಿ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ), ಜೆಡಿಎಸ್ ಅಭ್ಯರ್ಥಿಗಳು – 207.
* ಮತದಾರರ ಸಂಖ್ಯೆ – 5.21 ಕೋಟಿ
* ಪುರುಷ ಮತದಾರರ ಸಂಖ್ಯೆ – 2.62 ಕೋಟಿ
* ಮಹಿಳಾ ಮತದಾರರ ಸಂಖ್ಯೆ – 2.59 ಕೋಟಿ
* ಫಸ್ಟ್ ಟೈಮ್ ವೋಟರ್‌ಗಳ ಸಂಖ್ಯೆ – 9.17 ಲಕ್ಷ
* 100 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ – 16,976
* ಶಾಂತಿ ಭದ್ರತೆಗೆ ನಿಯೋಜನೆಯಾದ ಪೊಲಿಸರು – 2.2 ಲಕ್ಷ








