ನವದೆಹಲಿ : ಮಂಕಿಪಾಕ್ಸ್ ದೇಶ ಸೇರಿದಂತೆ ಜಗತ್ತಿನ ಕೊರೊನಾದಂತೆ ಆತಂಕ ಸೃಷ್ಟಿಸಿತ್ತು. ಆದರೆ, ಇನ್ನು ಮುಂದೆ ಮಂಕಿಪಾಕ್ಸ್ ಜಾಗತಿಕ ಆರೋಗ್ಯ ತುರ್ತು ಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಮಿತಿ ನಿನ್ನೆ ಶಿಫಾರಸು ಮಾಡಿದೆ. ಮಂಕಿಪಾಕ್ಸ್ ಇನ್ನು ಮುಂದೆ ಅಂತಾರಾಷ್ಟ್ರೀಯ ಕಾಳಜಿಯ, ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅದಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಆದರೂ ಎಲ್ಲ ಮಿಗಿದಿದೆ ಎಂದು ಭಾವಿಸಬೇಕಿಲ್ಲ. ಮಂಕಿಪಾಕ್ಸ್ ಗಂಭೀರ ಸಾರ್ವಜನಿಕ ಆರೋಗ್ಯ ಸವಾಲುಗಳನ್ನು ನಮಗೆ ಒಡ್ಡುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.








