ಬೆಂಗಳೂರು : ರಾಜ್ಯದಲ್ಲಿ ಮತದಾನ ಮುಗಿದಿದ್ದು, ನಾಳೆ ಫಲಿತಾಂಶ ಹೊರ ಬರಲಿದೆ. ಸಮೀಕ್ಷೆಗಳು ಅತಂತ್ರ ಭವಿಷ್ಯ ನುಡಿದಿದ್ದರೂ ಬಿಜೆಪಿ (BJP) ನಾಯಕರು ನಮಗೆ ಬಹುಮತ ಬರುತ್ತದೆ ಎಂದು ಹೇಳುತ್ತಿದ್ದಾರೆ.
ಮತದಾನದ (Election) ಮುನ್ನಾ ದಿನವಾದ ಇಂದು ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆಯಿತು. ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿಎಸ್ ಯಡಿಯೂರಪ್ಪ(Yediyurappa) ನಿವಾಸದಲ್ಲಿ ಮಹತ್ವದ ಸಭೆ ನಡೆದಿದೆ.
ಸಿಎಂ ಬೊಮ್ಮಾಯಿ, ಸಚಿವರಾದ ಕಾರಜೋಳ, ಮುರುಗೇಶ ನಿರಾಣಿ, ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿ ಹಲವರು ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದರು.
ಬಹುಮತದ ಸನಿಹಕ್ಕೆ ಬಂದರೆ ಪಕ್ಷೇತರರನ್ನು ಸೆಳೆದು ಮ್ಯಾಜಿಕ್ ಸಂಖ್ಯೆ 113 ತಲುಪಲು ಪ್ಲಾನ್. ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ಅಲ್ಪ ವ್ಯತ್ಯಾಸವಿದ್ದಲ್ಲಿ ಸರ್ಕಾರ ರಚನೆ ಕಸರತ್ತು ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರದಂತೆ ತಡೆಯುವುದು ಮೊದಲ ಆದ್ಯತೆ. ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಬೇಕಾ? ಬೇಡವೇ ಎಂಬೆಲ್ಲ ವಿಚಾರಗಳನ್ನು ಚರ್ಚೆ ಮಾಡಲಾಗಿದೆ ಎನ್ನಲಾಗಿದೆ.








