ಭಾರತೀಯ ನೌಕಾಪಡೆ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ ಸಿಬಿ) ಕೇರಳ ಕರಾವಳಿಯಲ್ಲಿ ಹಡಗಿನಲ್ಲಿ ಸಾಗಿಸಲಾಗುತ್ತಿದ್ದ ಸುಮಾರು 12 ಸಾವಿರ ಕೋಟಿ ರೂ. ಮೌಲ್ಯದ ಸುಮಾರು ಸುಮಾರು 2,500 ಕೆಜಿ ಮೆಥಾಂಫೆಟಮೈನ್ ಮಾದಕ ದ್ರವ್ಯವನ್ನು ವಶಕ್ಕೆ ಪಡೆದಿದೆ.
ಈ ಮೂಲಕ ಅದಿ ತೊಡ್ಡ ಮಾದಕ ದ್ರವ್ಯವದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾದಕ ದ್ರವ್ಯ ವಿರೋಧಿ ಸಂಸ್ಥೆ ಇದನ್ನು ವಶಕ್ಕೆ ಪಡೆದಿದ್ದು, ಪಾಕ್ ಪ್ರಜೆಯನ್ನು ಬಂಧಿಸಿದೆ. ಎನ್‌ಸಿಬಿ ಉಪ ಮಹಾನಿರ್ದೇಶಕ (ಕಾರ್ಯಾಚರಣೆ) ಸಂಜಯ್ ಕುಮಾರ್ ಸಿಂಗ್, ಆಫ್ಘಾನಿಸ್ತಾನದಿಂದ ಬರುವ ಔಷಧಗಳು ಮತ್ತು ಔಷಧಗಳ ಸಮುದ್ರ ಕಳ್ಳಸಾಗಾಣಿಕೆಯನ್ನು ಗುರಿಯಾಗಿಸಿ, ಈ ಪ್ರಕರಣ ಬೇಧಿಸಲಾಗಿದೆ. ಎನ್‌ಸಿಬಿಯಿಂದ ಕಳೆದ ಒಂದೂವರೆ ವರ್ಷಗಳಲ್ಲಿ ದಕ್ಷಿಣ ಮಾರ್ಗದ ಮೂಲಕ ಮಾದಕವಸ್ತು ಸಾಗಾಟದ ವಿರುದ್ಧ ನಡೆದ ಮೂರನೇ ಕಾರ್ಯಾಚರಣೆ ಇದಾಗಿದೆ. ಇಲ್ಲಿಯವರೆಗೆ ಸುಮಾರು 3,200 ಕೆಜಿ ಮೆಥಾಂಫೆಟಮೈನ್, 500 ಕೆಜಿ ಹೆರಾಯಿನ್, 529 ಕೆಜಿ ಹಶಿಶ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.








