ಭಯೋತ್ಪಾದನ ಧನಸಹಾಯ ವಿಚಕ್ಷಣ ದಳ(ಎಫ್.ಎ.ಟಿ.ಎಫ್) ಪಾಕಿಸ್ತಾನ ತನ್ನ ದೇಶದಲ್ಲಿರುವ ಉಗ್ರ ಸಂಘಟನೆಗಳಿಗೆ ಹರಿದು ಬರುವ ಅರ್ಥಿಕ ನೆರವನ್ನು ತಡೆಯಲು ಆಶಕ್ತವಾದ ಹಿನ್ನೆಲೆಯಲ್ಲಿ ಬೂದು ಪಟ್ಟಿಯಲ್ಲೇ ಮುಂದುವರಿಸುವುದಾಗಿ ಘೋಷಿಸಿದೆ. ಎಫ್.ಎ.ಟಿ.ಎಫ್ ಪಾಕಿಸ್ತಾನಕ್ಕೆ ಬೂದು ಪಟ್ಟಿಯಿಂದ ಹೊರಬರಲು 27 ಅಂಶಗಳ ಮಾರ್ಗಸೂಚಿಯನ್ನು ಸೂಚಿಸಿತ್ತು. ಆದರೆ ಪಾಕ್ 14 ಅಂಶಗಳನ್ನು ಮಾತ್ರ ಪಾಲಿಸಿರುವುದಕ್ಕೆ ಎಫ್.ಎ.ಟಿ.ಎಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಉಳಿದಿರುವ 13ಅಂಶಗಳನ್ನು ಜಾರಿಗೊಳಿಸ ಬೇಕು, ಇಲ್ಲವಾದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ.
ಇತ್ತೀಚೆಗೆ ನಡೆದ ಎಫ್.ಎ.ಟಿ.ಎಫ್ ಸರ್ವ ಸದಸ್ಯರ ಸಭೆಯ ಕೆಲವು ದಿನಗಳ ಮೊದಲು ಪಾಕ್, ಉಗ್ರ ಮಸೂದ್ ಅಜರ್ ಗೆ 11ವರ್ಷದ ಬಂಧನ ಶಿಕ್ಷೆ ವಿಧಿಸಿತ್ತು. ಈ ರೀತಿಯಾಗಿ ಎಫ್.ಎ.ಟಿ.ಎಫ್ ನ ಮೆಚ್ಚುಗೆ ಗಳಿಸಿ ಬೂದು ಪಟ್ಟಿಯಿಂದ ಹೊರಬರುವ ಯೋಜನೆ ಪಾಕ್ ನದಾಗಿತ್ತು. ಆದರೆ ಎಫ್.ಎ.ಟಿ.ಎಫ್ ಪಾಕ್ ನ ಯಾವುದೇ ಆಟಕ್ಕೆ ಸೊಪ್ಪು ಹಾಕದೇ ಕಪ್ಪು ಪಟ್ಟಿಗೆ ಸೇರಿಸುವುದಾಗಿ ಖಡಕ್ ವಾರ್ನಿಂಗ್ ಕೊಟ್ಟಿದೆ.
ದೆಹಲಿ ಪೊಲೀಸರ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳುವೆ: ಡಿಕೆ ಶಿವಕುಮಾರ್
ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ನೀಡಿರುವ ನೋಟಿಸ್‌ಗೆ ಉತ್ತರಿಸಲು ಕಾಲಾವಕಾಶ ಕೇಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯ ಕರ್ನಾಟಕ ಭವನದಲ್ಲಿ...








