ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಮಹೀ ಭಾಯ್‍ಯವರನ್ನು ಅವಲಂಬಿಸಿಲ್ಲ… ನನಗೆ ನನ್ನ ಮೇಲೆ ನಂಬಿಕೆ ಇದೆ – ಕುಲದೀಪ್ ಉಡಾಫೆ…!

admin by admin
June 18, 2020
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಮಹೀ ಭಾಯ್‍ಯವರನ್ನು ಅವಲಂಬಿಸಿಲ್ಲ… ನನಗೆ ನನ್ನ ಮೇಲೆ ನಂಬಿಕೆ ಇದೆ – ಕುಲದೀಪ್ ಉಡಾಫೆ…!

ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ 2019ರ ವಿಶ್ವಕಪ್ ನಂತರ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಈ ಬಾರಿಯ ಐಪಿಎಲ್‍ನಲ್ಲಿ ಆಡಬೇಕು ಅಂತ ಕಠಿಣ ಅಭ್ಯಾಸ ನಡೆಸಿದ್ರು. ಆ ಮೂಲಕ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸಬೇಕು ಎಂಬ ಆಸೆಯಲ್ಲಿದ್ದರು. ಆದ್ರೆ ಕೊರೋನಾ ವೈರಸ್ ಧೋನಿ ಆಸೆಗಳನ್ನು ಭಗ್ನಗೊಳಿಸಿದೆ. ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಮತ್ತು ಐಪಿಎಲ್ ಭವಿಷ್ಯ ಇನ್ನೂ ನಿರ್ಧಾರವಾಗಿಲ್ಲ. ಹೀಗಾಗಿ ಧೋನಿಯ ಕ್ರಿಕೆಟ್ ಭವಿಷ್ಯದ ಬಗ್ಗೆ ಹಲವಾರು ಪ್ರಶ್ನೆಗಳು ಎದುರಾಗಿವೆ.
ಆದ್ರೂ ಧೋನಿ ಟೀಮ್ ಇಂಡಿಯಾವನ್ನು ಮುನ್ನೆಡೆಸಿದ್ದ ರೀತಿಗೆ ಎಲ್ಲರೂ ಬೆರಗುಗೊಳುತ್ತಿದ್ದರು. ಪಂದ್ಯದ ಗತಿಯನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುತ್ತಿದ್ದ ಧೋನಿ ತಂಡದ ಆಟಗಾರರಿಗೆ ಸ್ಫೂರ್ತಿ ನೀಡ್ತಾ ಇದ್ರು. ಅದರಲ್ಲೂ ಸ್ಪಿನ್ನರ್‍ಗಳಿಗೆ ಸಾಕಷ್ಟು ಸಲಹೆ -ಮಾರ್ಗದರ್ಶನಗಳನ್ನು ನೀಡುತ್ತಿದ್ದರು. ಇದೀಗ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಕುಲ್ಚಾ ಗ್ಯಾಂಗ್‍ನ ಕುಲದೀಪ್ ಯಾದವ್ ಮಾತನಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ 2019ರ ವಿಶ್ವಕಪ್ ನಂತರ ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳನ್ನು ಆಡಿಲ್ಲ. ಒಬ್ಬ ಆಟಗಾರನಾಗಿ ಧೋನಿಯವರ ಸಲಹೆ -ಮಾರ್ಗದರ್ಶನಗಳನ್ನು ನಾನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಹಾಗಂತ ನನ್ನ ಸಾಮಥ್ರ್ಯ ಏನು ಎಂಬುದನ್ನು ನಾನು ಯಾರಿಗೂ ಸಾಬೀತುಪಡಿಸುವ ಅಗತ್ಯವಿಲ್ಲ. ನಾನು ಈಗ ಅವರನ್ನು ಹೆಚ್ಚು ಅವಲಂಬಿತನಾಗುತ್ತೇನೆ ಎಂದು ಹೇಳುವಂಗಿಲ್ಲ. ಯಾಕಂದ್ರೆ ನನ್ನ ಸಾಮಥ್ರ್ಯದ ಮೇಲೆ ನನಗೆ ನಂಬಿಕೆ ಇದೆ. ಅದಕ್ಕೆ ಸರಿಯಾಗಿ ನಾನು ಅಭ್ಯಾಸ ಮಾಡುತ್ತಿದ್ದೇನೆ. ಅಷ್ಟಕ್ಕೂ ಇದೊಂದು ಟೀಮ್ ವರ್ಕ್ ಅಂತ ಧೋನಿಯ ಬಗ್ಗೆ ಕುಲದೀಪ್ ಯಾದವ್ ಸ್ವಲ್ಪ ಉಡಾಫೆಯಾಗಿಯೇ ಮಾತನಾಡಿದ್ದಾರೆ.
ನಿಜ. ಅದರಲ್ಲಿ ಎರಡು ಮಾತಿಲ್ಲ. ಮಹೀ ಭಾಯ್ ನನಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತಿದ್ದರು. ಅದಕ್ಕೆ ಬಲವಾದ ಕಾರಣವೂ ಇತ್ತು. ವಿಕೆಟ್ ಕೀಪರ್ ಯಾವಾಗಲೂ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ ಎಂಬುದನ್ನು ಬೇಗನೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅದ್ರಲ್ಲೂ ಮಹೀ ಭಾಯ್ ನಂತಹ ಅನುಭವಿ ಆಟಗಾರರ ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾನೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದರು. ಇದೆಲ್ಲಾ ಟೀಮ್ ವರ್ಕ್ ಅಂತ ಕುಲದೀಪ್ ಯಾದವ್ ಹೇಳಿದ್ದಾರೆ.
ಎಡಗೈ ಬೌಲರ್ ಆಗಿರುವ ಕುಲದೀಪ್ ಯಾದವ್ ಅವರು ಸ್ಥಿರ ಪ್ರದರ್ಶನ ನೀಡದ ಕಾರಣ ಈಗ ತಂಡದಿಂದ ಹೊರಗುಳಿದಿದ್ದಾರೆ. ಆದ್ರೆ ಕುಲದೀಪ್ ಯಾದವ್ ಮೂರು ಮಾದರಿಯ ಕ್ರಿಕೆಟ್ ನಲ್ಲೂ ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಬೌಲರ್. ಈಗಾಗಲೇ ಯಾದವ್ ಆರು ಟೆಸ್ಟ್ ಪಂದ್ಯಗಳಲ್ಲಿ 24 ವಿಕೆಟ್, 60 ಏಕದಿನ ಪಂದ್ಯಗಳಲ್ಲಿ 104 ವಿಕೆಟ್ ಹಾಗೂ 21 ಟಿ-ಟ್ವೆಂಟಿ ಪಂದ್ಯಗಳಲ್ಲಿ 39 ವಿಕೆಟ್ ಕಬಳಿಸಿದ್ದಾರೆ.
ಇನ್ನು ಕುಲದೀಪ್ ಯಾದವ್ ಧೋನಿಗೆ ಈ ರೀತಿ ಟಾಂಗ್ ಕೊಡುತ್ತಿರುವುದು ಇದೇನೂ ಹೊಸತಲ್ಲ. ಕೆಲವೊಂದು ಸಲ ಮೈದಾನದಲ್ಲೂ ಧೋನಿಯ ಮಾತುಗಳನ್ನು ಕೇಳುತ್ತಿರಲಿಲ್ಲ. ಹೀಗಾಗಿ ಧೋನಿ ಕೆಲವೊಂದು ಬಾರಿ ಕುಲದೀಪ್ ಯಾದವ್‍ಗೆ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಈ ವಿಚಾರವನ್ನು ಸ್ವತಃ ಕುಲದೀಪ್ ಯಾದವ್ ಅವರೇ ಹೇಳಿಕೊಂಡಿದ್ದರು. ನಾನು ಹುಚ್ಚನಲ್ಲ. 300 ಏಕದಿನ ಪಂದ್ಯಗಳನ್ನು ಆಡಿದ್ದೇನೆ ಅಂತ ಧೋನಿ ಒಂದು ಬಾರಿ ಮೈದಾನದಲ್ಲೇ ಕುಲದೀಪ್ ಯಾದವ್‍ಗೆ ಹೇಳಿದ್ದರು.

Related posts

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

August 3, 2026
anna-from-mexico-movie-release-date-dhananjay-shankar-guru

film- ಡಿಸೆಂಬರ್‌ 24ಕ್ಕೆ ತೆರೆಗೆ ಬರಲಿದೆ ಧನಂಜಯ್‌ ಅಭಿನಯದ ‘ಅಣ್ಣ ಫ್ರಮ್‌ ಮೆಕ್ಸಿಕೋ’: ಬರ್ತಿದೆ ‘ಬಡವ ರಾಸ್ಕಲ್’ ಹಿಟ್ ಕಾಂಬಿನೇಷನ್ !

August 3, 2026
Tags: bccicskICCKuldeep YadavM.S DhoniRCBteam india
ShareTweetSendShare
Join us on:

Related Posts

jasprit-bumrah-ruled-out-sri-lanka-test-series-auqib-nabi-included

Team india- ಲಂಕಾ ಟೆಸ್ಟ್ ಸರಣಿಯಿಂದ ಬೂಮ್ರಾ ಔಟ್.. ಔಕಿಬ್ ನಬಿ ಇನ್..! 

by admin
August 3, 2026
0

  ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್  ಬೌಲರ್ ಮತ್ತೆ ಗಾಯದಿಂದ ಬಳುತ್ತಿದ್ದಾರೆ. ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ವೇಗಿ ಮುಂಬರುವ ಲಂಕಾ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ....

anna-from-mexico-movie-release-date-dhananjay-shankar-guru

film- ಡಿಸೆಂಬರ್‌ 24ಕ್ಕೆ ತೆರೆಗೆ ಬರಲಿದೆ ಧನಂಜಯ್‌ ಅಭಿನಯದ ‘ಅಣ್ಣ ಫ್ರಮ್‌ ಮೆಕ್ಸಿಕೋ’: ಬರ್ತಿದೆ ‘ಬಡವ ರಾಸ್ಕಲ್’ ಹಿಟ್ ಕಾಂಬಿನೇಷನ್ !

by admin
August 3, 2026
0

ಕನ್ನಡ ಚಿತ್ರರಂಗದ ಖ್ಯಾತ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್‌ ಮೆಕ್ಸಿಕೋ’ (Anna From Mexico) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ....

allu-arjun-accident-insurance-1000-fans-aafa-summit-karnataka

film- ಅಭಿಮಾನಿಗಳ ಸುರಕ್ಷತೆಗೆ ಮುಂದಾದ ‘ಐಕಾನ್ ಸ್ಟಾರ್’; ಕರ್ನಾಟಕದ 150 ಮಂದಿ ಸೇರಿ ಸಾವಿರ ಫ್ಯಾನ್ಸ್‌ಗೆ ‘ಅಪಘಾತ ವಿಮೆ’ ಮಾಡಿಸಿದ ಅಲ್ಲು ಅರ್ಜುನ್!

by admin
August 3, 2026
0

ಹೈದರಾಬಾದ್: ತಮ್ಮ ನಟನೆ ಮತ್ತು ಅದ್ಭುತ ಡ್ಯಾನ್ಸ್ ಮೂಲಕ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುವ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್, ಇದೀಗ ತಮ್ಮ ಮಾನವೀಯ ನಡೆಯಿಂದ ಮತ್ತೊಮ್ಮೆ...

bhavantara-kannada-movie-modamodalidu-song-released-karthik-sharma-hombale-music

film- ಕಾರ್ತಿಕ್ ಶರ್ಮಾ ನಿರ್ದೇಶನದ ‘ಭಾವಾಂತರ’ ಚಿತ್ರದ ‘ಮೊದಮೊದಲಿದು’ ಮೆಲೋಡಿ ಹಾಡು ರಿಲೀಸ್‌

by admin
August 3, 2026
0

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಬಾಲನಟನಾಗಿ ಹಾಗೂ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆ ಕಾರ್ತಿಕ್ ಶರ್ಮಾ ಈಗ ‘ಭಾವಾಂತರ’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ....

jana-nayagan-box-office-collection-thalapathy-vijay-kvn-productions-250-crore

film- ಬಾಕ್ಸ್ ಆಫೀಸ್‌ನಲ್ಲಿ ದಳಪತಿ ವಿಜಯ್ ‘ಜನ ನಾಯಗನ್’ ಅಬ್ಬರ: ₹250 ಕೋಟಿಗೂ ಹೆಚ್ಚು ಕಲೆಕ್ಷನ್!

by admin
August 3, 2026
0

ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ಪೂರ್ಣಪ್ರಮಾಣದ ರಾಜಕೀಯಕ್ಕೆ ಧುಮುಕಿರುವ ತಮಿಳುನಾಡಿನ ನೂತನ ಮುಖ್ಯಮಂತ್ರಿ, 'ದಳಪತಿ' ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram