ಸರ್ಕಾರಿ ಅಧಿಕಾರಿಯೊಬ್ಬಾತನ ಮೊಬೈಲ್ ನೀರಿಗೆ ಬಿದ್ದಿದ್ದಕ್ಕೆ ಡ್ಯಾಮ್ ನಲ್ಲಿದ್ದ ನೀರನ್ನು ಪೂರ್ತಿ ಹೊರಗೆ ಹಾಕಿ, ಹುಡುಕಿ ಕೊಟ್ಟಿರುವ ಘಟನೆ ಛತ್ತೀಸ್ಗಢ (Chhattisgarh) ದ ಕಂಕೇರ್ ಜಿಲ್ಲೆಯ ಕೊಯಿಲಿಬೀಡಾ ಬ್ಲಾಕ್ನ ಖೇರ್ಕಟ್ಟಾ ಅಣೆಕಟ್ಟಿನಲ್ಲಿ (Kherkatta Paralkot reservoir) ನಡೆದಿದೆ.
ಆಹಾರ ಇಲಾಖೆಯ ಆಧಿಕಾರಿ ರಾಜೇಶ್ ವಿಶ್ವಾಸ್ ವಾಯುವಿಹಾರಕ್ಕೆ ಆಣೆಕಟ್ಟು ಬಳಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಕೈ ಜಾರಿ ಮೊಬೈಲ್ ಡ್ಯಾಂನೊಳಗೆ ಬಿದ್ದಿದೆ. ಮೊಬೈಲ್ (Mobile) 1 ಲಕ್ಷ ರೂ. ದ್ದಾಗಿದೆ. ಗಲಿಬಿಲಿಗೊಂಡ ಅಧಿಕಾರಿ ನೀರಿಗೆ ಬಿದ್ದ ಮೊಬೈಲ್ಗಾಗಿ ಇಡೀ ಅಣೆಕಟ್ಟಿನ ನೀರನ್ನೇ ಖಾಲಿ ಮಾಡುವಂತೆ ಆದೇಶಿಸಿದ್ದಾರೆ. ಅಧಿಕಾರಿಗಳು ಸುಮಾರು 21 ಲಕ್ಷ ಲೀಟರ್ ನೀರನ್ನು ಹೊರತೆಗೆದು ಮೊಬೈಲ್ ಹುಡುಕಿ ಕೊಟ್ಟಿದ್ದಾರೆ.
ಪಂಪ್ ಮಾಡಿದ ನೀರು ಉಪಯೋಗಕ್ಕೆ ಯೋಗ್ಯವಲ್ಲ. ಮೊಬೈಲ್ ಫೋನ್ ತನ್ನ ವೈಯಕ್ತಿಕವಾಗಿದ್ದರಿಂದ ಅದರಲ್ಲಿ ಅನೇಕ ಪ್ರಮುಖರ ಸಂಪರ್ಕಗಳಿವೆ. ಹೀಗಾಗಿ ನೀರು ಖಾಲಿ ಮಾಡಿ ಅದನ್ನು ಹುಡುಕಬೇಕಾಯಿತು. ಅಲ್ಲದೆ ಅಣೆಕಟ್ಟಿನ ನೀರು ಹೊರತೆಗೆಯಲು ಸುಮಾರು 7 ಸಾವಿರದಿಂದ 8 ಸಾವಿರ ರೂ. ಮೌಲ್ಯದ ಡೀಸೆಲ್ ಬಳಸಲಾಗಿದೆ. ಈ ಬಗ್ಗೆ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮೌಖಿಕವಾಗಿ ಆದೇಶ ಹೊರಡಿಸಲಾಗಿತ್ತು. ನನ್ನ ಕ್ರಮದಿಂದ ಯಾರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಅಧಿಕಾರಿಯ ಬೇಜವಾಬ್ದಾರಿತನದಿಂದ ಸೋಮವಾರದಿಂದ ಗುರುವಾರದವರೆಗೆ ಸುಮಾರು 21 ಲಕ್ಷ ನೀರು ಪೋಲಾಗಿದೆ. ಈ ನೀರನ್ನು ರೈತರು 1.500 ಸಾವಿರ ಕೃಷಿ ಭೂಮಿಗೆ ಬಳಸಿಕೊಳ್ಳಲಾಗುತ್ತಿತ್ತು ಎನ್ನಲಾಗಿತ್ತು.








