ADVERTISEMENT
Tuesday, May 12, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

2011ರ ವಿಶ್ವಕಪ್ ಸೇಲ್..? ಮ್ಯಾಚ್ ಫಿಕ್ಸಿಂಗ್ ಆಗಿತ್ತಂತೆ ಫೈನಲ್ ಮ್ಯಾಚ್

admin by admin
June 18, 2020
in National, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಕೊಲೊಂಬೋ: 2011ರಲ್ಲಿ ನಡೆದ ಭಾರತ ಮತ್ತು ಶ್ರೀಲಂಕಾ ನಡುವಿನ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯ ಫಿಕ್ಸಿಂಗ್ ಆಗಿತ್ತು. ಈ ಮೂಲಕ 2011ರ ವಿಶ್ವಕಪ್ ಭಾರತಕ್ಕೆ ಸೇಲಾಗಿದೆ ಎಂದು ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುಥಗಮೆ ಗಂಭೀರ ಆರೋಪ ಮಾಡಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಿದ್ದ ಹೈವೋಲ್ಟೇಜ್ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ನೇತೃತ್ವದ ಭಾರತ ತಂಡ, ಶ್ರೀಲಂಕಾವನ್ನು 6 ವಿಕೆಟ್‍ಗಳಿಂದ ಸೋಲಿಸಿ ಕಪಿಲ್‍ದೇವ್ ನಂತರ ಎರಡನೇ ಬಾರಿ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿತ್ತು.
ಧೋನಿ ನಾಯಕತ್ವದಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಶ್ರೀಲಂಕಾವನ್ನು ಫೈನಲ್ ಸುತ್ತಿನಲ್ಲಿ ಮಣಿಸಲು ಸಾಧ್ಯವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಮಹೇಲ ಜಯವರ್ದನೆ ಅವರ ಸ್ಪೋಟಕ ಶತಕ(103)ದ ಬಲದಿಂದ 50 ಓವರ್‍ಗಳಲ್ಲಿ 274 ರನ್ ಗಳಿಸಿ ಟೀಂ ಇಂಡಿಯಾಕ್ಕೆ 275ರನ್‍ಗೆ ಟಾರ್ಗೆಟ್ ನೀಡಿತ್ತು.

Related posts

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

May 12, 2026
ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

May 12, 2026

ಆದರೆ ಟಿವಿ ಸಂದರ್ಶನವೊಂದರಲ್ಲಿ ಫಿಕ್ಸಿಂಗ್ ಆರೋಪ ಮಾಡಿರುವ ಮಾಜಿ ಸಚಿವ ಮಹಿಂದಾನಂದ, ಗೌತಮ್ ಗಂಭೀರ್ 97 ರನ್ ಹಾಗೂ ಧೋನಿ ಅವರ 91 ರನ್‍ಗಳ ಜಾಣ್ಮೆಯ ಆಟ ವಿಶ್ವಕಪ್ ಗೆಲ್ಲಲು ಸಾಧ್ಯವಾಯಿತು ಎಂದು ಭಾರತ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ.
2011ರ ವಿಶ್ವಕಪ್ ಯಾಕೆ ಮಾರಾಟ ಆಯ್ತು ಎಂದು ಹೇಳುತ್ತಿದ್ದೇನೆಂದರೆ ಆಗ ನಾನು ಕ್ರೀಡಾ ಮಂತ್ರಿಯಾಗಿದ್ದೆ. ಹೀಗಾಗಿ ನನಗೆ ಈ ವಿಚಾರ ಗೊತ್ತು ಎಂದು ಹೇಳಿಕೊಂಡಿದ್ದಾರೆ.
ಈ ಪಂದ್ಯವನ್ನು ಶ್ರೀಲಂಕಾ ಗೆದ್ದೇ ಗೆಲ್ಲುತ್ತಿತ್ತು. ಮ್ಯಾಚ್ ಫಿಕ್ಸಿಂಗ್‍ನಿಂದಾಗಿ ವಿಶ್ವಕಪ್ ನಮಗೆ ದಕ್ಕಲಿಲ್ಲ. ದೇಶದ ಕ್ರೀಡಾ ಸಚಿವನಾಗಿ ನಾನು ಈ ಸಂಗತಿಯನ್ನು ಅಂದು ಹೇಳಲು ಸಾಧ್ಯವಿರಲಿಲ್ಲ ಎಂದಿದ್ದಾರೆ.
ಈ ಮಾತನ್ನು ತುಂಬಾ ಜವಾಬ್ದಾರಿಯಿಂದಲೇ ಹೇಳುತ್ತಿದ್ದೇನೆ. 2011ರ ವಿಶ್ವಕಪ್ ಫಿಕ್ಸ್ ಆಗಿತ್ತು. ಈ ಬಗ್ಗೆ ಎಲ್ಲಿ ಬೇಕಾದರೂ ನಾನು ಚರ್ಚೆಗೆ ಸಿದ್ಧ ಎಂದು ಮಹಿಂದಾನಂದ ತಿಳಿಸಿದ್ದಾರೆ.

ದಾಖಲೆ ಇದ್ರೆ ಬಹಿರಂಗಪಡಿಸಿ-ಸಂಗಕ್ಕರ ಸವಾಲು
2011ರ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಆಗಿರುವ ಬಗ್ಗೆ ನಿಮ್ಮ ಬಳಿ ದಾಖಲೆ ಇದ್ದರೆ ಬಹಿರಂಗ ಪಡಿಸಿ. ಜತೆಗೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದಾಖಲೆ ಕೊಡಲಿ ಎಂದು ಮಾಜಿ ಕ್ಯಾಪ್ಟನ್ ಕುಮಾರ ಸಂಗಕ್ಕರ ಸವಾಲು ಹಾಕಿದ್ದಾರೆ.
ಈಗಲೂ ಕೂಡ ಕಾಲ ಮಿಂಚಿಲ್ಲ. ಮಹಿಂದಾನಂದ ಅವರು ಕೊಟ್ಟ ದಾಖಲೆ ಆಧರಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ, ಭದ್ರತಾ ಘಟಕ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸಲಿ ಎಂದು ಸಂಗಕ್ಕರ ಟ್ವಿಟ್ಟರ್‍ನಲ್ಲಿ ತಿರುಗೇಟು ನೀಡಿದ್ದಾರೆ.
ಈ ಫಿಕ್ಸಿಂಗ್‍ನಲ್ಲಿ ಲಂಕಾ ಆಟಗಾರರು ಶಾಮೀಲಾಗಿಲ್ಲ. ಆದರೆ, ಕೆಲ ಶಕ್ತಿಗಳ ಇದರ ಹಿಂದೆ ಇವೆ ಎಂದು ಮಹಿಂದಾನಂದ ಗಂಭೀರ ಆರೋಪ ಮಾಡಿದ್ದಾರೆ.

ರಾಜಪಕ್ಷೆ ಜತೆ ಕುಳಿತಿದ್ದ ಮಹಿಂದಾನಂದ
2011ರ ವಿಶ್ವಕಪ್ ಫೈನಲ್ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದಾಗ ಶ್ರೀಲಂಕಾದ ಅಂದಿನ ಅಧ್ಯಕ್ಷ ಮಹಿಂದಾ ರಾಜಪಕ್ಷೆ ಕೂಡ ಉಪಸ್ಥಿತರಿದ್ದರು. ರಾಜಪಕ್ಷ ಜತೆಗೆ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುಥಗಮಗೆ ಕುಳಿತಿದ್ದರು.
ಮಹಿಂದಾನಂದ ಆರೋಪಕ್ಕೆ ಮಾಜಿ ಕ್ಯಾಪ್ಟನ್ ಅರ್ಜುನ್ ರಣತುಂಗಾ ಸಹ ಕಿಡಿಕಾರಿದ್ದು, 2011ರಲ್ಲಿ ಆಗಿದ್ದ ಮ್ಯಾಚ್ ಫಿಕ್ಸಿಂಗ್ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.

Tags: 2011 World Cupindiamatch fixing
ShareTweetSendShare
Join us on:

Related Posts

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

ಚಿನ್ನ ಕೊಳ್ಳಬೇಡಿ ಎಣ್ಣೆ ಬಳಸದಿರಿ ಎಂಬ ಮೋದಿಯವರ ಕರೆಯ ಹಿಂದಿನ ಅಸಲಿ ರಹಸ್ಯ ಬಯಲು!

by Shwetha
May 12, 2026
0

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ದೇಶದ ಜನತೆಗೆ ಕೆಲವು ಮಹತ್ವದ ಮನವಿಗಳನ್ನು ಮಾಡಿದ್ದಾರೆ. ಚಿನ್ನ ಖರೀದಿಸಬೇಡಿ, ವಾಹನ ಬಳಕೆ ತಗ್ಗಿಸಿ, ವಿದೇಶಿ ಪ್ರವಾಸ ಬೇಡ ಎಂಬಂತಹ ಸಲಹೆಗಳ...

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿ ಸುದ್ದಿ..!

by Shwetha
May 12, 2026
0

ರಾಜ್ಯದ ಸರ್ಕಾರಿ ನೌಕರರು ಹಾಗೂ ನಿವೃತ್ತ ವೇತನದಾರರಿಗೆ ಸರ್ಕಾರದಿಂದ ದೊಡ್ಡ ಮಟ್ಟದ ಗುಡ್ ನ್ಯೂಸ್ ಸಿಕ್ಕಿದೆ. ದುಬಾರಿ ಜೀವನ ವೆಚ್ಚದ ನಡುವೆ ಸರ್ಕಾರ ಈಗ ತುಟ್ಟಿಭತ್ಯೆ (DA)...

ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮೆಟ್ಟು ಹಿಡಿಯಲೂ ಸಿದ್ಧ: ಅಥಣಿಯಲ್ಲಿ ಲೂಟಿಕೋರರ ವಿರುದ್ಧ ಸವದಿ ಗುಡುಗು

ನನ್ನ ಕ್ಷೇತ್ರದ ಜನರ ರಕ್ಷಣೆಗೆ ಮೆಟ್ಟು ಹಿಡಿಯಲೂ ಸಿದ್ಧ: ಅಥಣಿಯಲ್ಲಿ ಲೂಟಿಕೋರರ ವಿರುದ್ಧ ಸವದಿ ಗುಡುಗು

by Shwetha
May 12, 2026
0

ರೈತರು ಮತ್ತು ನನ್ನ ಕ್ಷೇತ್ರದ ಜನರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸುಮ್ಮನಿರುವುದಿಲ್ಲ. ಅಂತಹ ಪ್ರಸಂಗ ಬಂದರೆ ಮೆಟ್ಟಿನಲ್ಲಿ ಹೊಡೆಯುತ್ತೇನೆ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ಪರೋಕ್ಷವಾಗಿ ಬಿಜೆಪಿ...

‘ಪೆದ್ದಿ’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

‘ಪೆದ್ದಿ’ ಟ್ರೇಲರ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

by Shwetha
May 12, 2026
0

ವಿಶ್ವ ಸಿನಿರಂಗದಲ್ಲೇ ಸದ್ದು ಮಾಡಿದ್ದ RRR ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿದ ರಾಮ್ ಚರಣ್ ಇದೀಗ ಮತ್ತೊಂದು ಭಾರಿ ನಿರೀಕ್ಷೆಯ ಸಿನಿಮಾದೊಂದಿಗೆ ಅಭಿಮಾನಿಗಳ ಮುಂದೆ...

ಡಿ. ಸುಧಾಕರ್ ಗೆ ಅಂತಿಮ ವಿದಾಯ

ಡಿ. ಸುಧಾಕರ್ ಗೆ ಅಂತಿಮ ವಿದಾಯ

by Shwetha
May 12, 2026
0

ರಾಜ್ಯದ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಡಿ. ಸುಧಾಕರ್ ಅವರು ತಮ್ಮ 66 ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಎರಡು ತಿಂಗಳಿಂದ ಶ್ವಾಸಕೋಶದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram