ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಗೆ ಆಗಾಗ ಕೊಲೆ ಬೆದರಿಕೆಗಳು ಬರುತ್ತಿದ್ದವು. ಸದ್ಯ ಈಗ ಸುದ್ದಿ ವಾಹಿನಿಯ ಸಂದರ್ಶನದಲ್ಲಿಯೇ ಬಹಿರಂಗವಾಗಿ ಜೀವ ಬೆದರಿಕೆ ಹಾಕಲಾಗಿದೆ.
ಆಗಾಗ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಬೆದರಿಕೆ ಕರೆಗಳು ಬರುತ್ತಿದ್ದವು. ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ (Gangster Goldy Brar) ಕೂಡ ಸಲ್ಮಾನ್ ಖಾನ್ರ ಹತ್ಯೆಯ ಬಗ್ಗೆ ಮಾತನಾಡಿದ್ದಾನೆ. ಮೋಸ್ಟ್ ವಾಂಟೆಂಡ್ ಕ್ರಿಮಿನಲ್ ಆಗಿರುವ ಗೋಲ್ಡಿ ಬ್ರಾರ್ ಜೊತೆ ಫೋನ್ ಮೂಲಕ ಸಂದರ್ಶನ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಸಲ್ಮಾನ್ ಖಾನ್ ನನ್ನು ಖಂಡಿತಾ ಕೊಲೆ ಮಾಡುತ್ತೇವೆ ಎಂದು ಆತ ಶಪಥ ಮಾಡಿದ್ದಾನೆ.
ಸಲ್ಮಾನ್ ಖಾನ್ ಅವರು 1998ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆ ಆಡಿದ್ದರು. ಬಿಷ್ಣೋಯ್ ಸಮುದಾಯದವರು ಕೃಷ್ಣಮೃಗವನ್ನು ಪವಿತ್ರವೆಂದು ನಂಬುತ್ತಾರೆ. ಹೀಗಾಗಿ ಬಿಷ್ಣೋಯ್ ಸಮುದಾಯದ ಕೆಲವರು ಸಲ್ಲು ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಲ್ಮಾನ್ ಖಾನ್ನನ್ನು ಖಂಡಿತಾ ಕೊಲ್ಲುತ್ತೇವೆ. ಆತ ಬಿಷ್ಣೋಯ್ ಸಮುದಾಯಕ್ಕೆ ಅವಮಾನ ಮಾಡಿದ್ದಾನೆ. ನಾವು ಪವಿತ್ರವೆಂದು ತಿಳಿಯುವ ಕೃಷ್ಣಮೃಗವನ್ನು ಆತ ಸಾಯಿಸಿದ್ದಾನೆ. ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು. ಆದರೆ ಅವನು ಕ್ಷಮೆ ಕೇಳಿಲ್ಲ. ಸಲ್ಮಾನ್ ಖಾನ್ ನೊಂದಿಗೆ ನಮ್ಮ ಎಲ್ಲ ಶತೃಗಳನ್ನು ನಾವು ಕೊಲ್ಲುತ್ತೇವೆ ಎಂದು ಹೇಳಿದ್ದಾನೆ.








