ಬೆಂಗಳೂರು: ಇದೇ ನನ್ನ ಕೊನೆಯ ಚುನಾವಣೆ ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.
ಕ್ಷೇಮವನದಲ್ಲಿ ನೂತನ ಶಾಕರಿಗೆ ನಡೆದ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಇನ್ನು ಮುಂದೆ ನಾನು ರಾಜಕೀಯವಾಗಿ ನಿವೃತ್ತಿಯಾಗುತ್ತೇನೆ. ಜನರ ನಡುವೆ ಇದ್ದ ಸಂದರ್ಭದಲ್ಲಿ ಜನರ ಕಷ್ಟ ಸುಖಕ್ಕೆ ಸ್ಪಂದನೆ ಮಾಡಿದರೆ ಜನರು ಕೈ ಬಿಡುವುದಿಲ್ಲ. ನಮ್ಮ ತಪ್ಪಿನಿಂದ ಸೋತಿರುತ್ತೇವೆ. ಕೆಲವು ಲೋಪದಿಂದಾಗಿ ಸೋಲು ಕಂಡಿರುತ್ತೇವೆ. ಜನರ ಪರ, ಜನ ಜೊತೆ ಇದ್ದರೆ ಅವರು ಯಾವತ್ತೂ ಕೈ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗ್ತೀನಿ. ಆದರೆ ಜನ ಮಧ್ಯೆ ಇರುತ್ತೇನೆ ಅಂತ ತಿಳಿಸಿದರು.








