ತನ್ನ ಸಾವಿನ ನಂತರ ಯಾರಿಗೂ ಹೊರೆಯಾಗಬಾರದು ಎಂಬ ನಿಟ್ಟಿನಲ್ಲಿ ವ್ಯಕ್ತಿಯೊಬ್ಬರು 15 ವರ್ಷಗಳ ಹಿಂದೆಯೇ ಗುಂಡಿ ತೋಡಿಟ್ಟು, ನಾನು ನಿಧನವಾದ ನಂತರ ತೋಡಿದ ಗುಂಡಿಯಲ್ಲಿ ಅಂತ್ಯ ಸಂಸ್ಕಾರ(Bury) ಮಾಡುವಂತೆ ಸೂಚಿಸಿದ್ದರು. ಸದ್ಯ ಅವರ ಕುಟುಂಬಸ್ಥರು ಅದೇ ಗುಂಡಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jewargi) ತಾಲೂಕಿನ ಹಿಪ್ಪರಗಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸಿದ್ದಪ್ಪ (96) ಸಾವನ್ನಪ್ಪಿದ ವ್ಯಕ್ತಿ. ಸಾವಿನ ನಂತರ ಯಾರಿಗೂ ಹೊರೆಯಾಗಬಾರದು ಎಂಬ ಕಾರಣಕ್ಕೆ 15 ವರ್ಷಗಳ ಹಿಂದೆ ತಾವೇ ತಮ್ಮ ಅಂತ್ಯಸಂಸ್ಕಾರಕ್ಕೆಂದು ಗುಂಡಿ ತೋಡಿದ್ದರು
ಸಿದ್ದಪ್ಪ ಹಾಗೂ ಅವರ ಪತ್ನಿ ನೀಲಮ್ಮಳಿಗಾಗಿ 2 ಗುಂಡಿಯನ್ನು ತೋಡಲಾಗಿತ್ತು. 6 ವರ್ಷಗಳ ಹಿಂದೆ ನೀಲಮ್ಮ ಸಾವನ್ನಪ್ಪಿದಾಗ ತೋಡಿದ್ದ ಗುಂಡಿಯಲ್ಲಿಯೇ ಅಂತ್ಯಸಂಸ್ಕಾರ ಮಾಡಲಾಗಿತ್ತು. ಸದ್ಯ ಸಿದ್ದಪ್ಪ ಕೂಡ ವಿಧಿವಶರಾಗಿದ್ದು, ಪತ್ನಿಯ ಪಕ್ಕದ ಗುಂಡಿಯಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲಾಗಿದೆ.








